
ಗ್ರಾಮ ಲೆಕ್ಕಿಗನ ಕರಾಮತ್ತು…ಬದುಕಿದ್ದ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್…ಮರಣಕ್ಕೆ ಮುನ್ನಾ ದಿನವೇ ಮರಣ ಪ್ರಮಾಣ ಪತ್ರ…
- CrimeMysore
- February 25, 2023
- No Comment
- 143

ಗ್ರಾಮ ಲೆಕ್ಕಿಗನ ಕರಾಮತ್ತು…ಬದುಕಿದ್ದ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್…ಮರಣಕ್ಕೆ ಮುನ್ನಾ ದಿನವೇ ಮರಣ ಪ್ರಮಾಣ ಪತ್ರ…
ತಲಕಾಡು,ಫೆ25,Tv10 ಕನ್ನಡ
ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬದುಕಿದ್ದರೂ ಗ್ರಾಮ ಲೆಕ್ಕಿಗನೊಬ್ಬ ಸರ್ಟಿಫಿಕೇಟ್ ನೀಡಿ ಅಕ್ರಮಕ್ಕೆ ಸಾಥ್ ನೀಡಿರುವ ಪ್ರಕರಣ ತಲಕಾಡಿನಲ್ಲಿ ಬೆಳಕಿಗೆ ಬಂದಿದೆ.ತಲಕಾಡು ಗ್ರಾಮ ಲೆಕ್ಕಿಗ ಪ್ರಶಾಂತ್ ಮಾಡಿದ ಎಡವಟ್ಟಿಗೆ ದೂರುದಾರ ನರೇಂದ್ರ ಹೈರಾಣರಾಗಿದ್ದಾರೆ.ಆಸ್ಪತ್ರೆಯಲ್ಲಿ ಮರಣ ಹೊಂದುವ ಮುನ್ನಾ ದಿನಕ್ಕೆ ಡೆತ್ ಸರ್ಟಿಫಿಕೇಟ್ ನೀಡಿರುವ ವಿ.ಎ.ಪ್ರಶಾಂತ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ವ್ಯಕ್ತಿ ಪುತ್ರ ನರೇಂದ್ರ ಎಂಬುವರು ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದಾರೆ ಹಾಗೂ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಲಕಾಡಿನ ಟಿ.ರಂಗೇಗೌಡ ಎಂಬುವರು 7-12-2018 ರಂದು ಕಾರು ಅಪಘಾತದಲ್ಲಿ ಸಿಲುಕಿ ಗಾಯಗೊಂಡು ಮೈಸೂರಿನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ರಂಗೇಗೌಡ ರವರು 8-12-2023 ರಂದು ಮೃತಪಟ್ಟಿದ್ದಾರೆ.ನರೇಂದ್ರ ರವರು ತಮ್ಮ ತಂದೆ ವಿಧಿವಶರಾದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಡೆತ್ ಸರ್ಟಿಫಿಕೇಟ್ ಪಡೆದಿದ್ದಾರೆ.ಪಾಲಿಕೆಯಲ್ಲಿ ನೀಡಿದ ಸರ್ಟಿಫಿಕೇಟ್ ನಲ್ಲಿ 8-12-2018 ದಿನಾಂಕ ನಮೂದಾಗಿದೆ.ಆದರೆ ಗ್ರಾಮ ಲೆಕ್ಕಿಗ ಪ್ರಶಾಂತ್ ರವರು ತಲಕಾಡು ನಾಡಕಚೇರಿಯಲ್ಲಿ 7-12-2018 ರಂದೇ ಮೃತಪಟ್ಟಿರುವುದಾಗಿ ಡೆತ್ ಸರ್ಟಿಫಿಕೇಟ್ ನೀಡಿ ಎಡವಟ್ಟಿಗೆ ಕಾರಣರಾಗಿದ್ದಾರೆ.ರಂಗೇಗೌಡ ಹೆಸರಿನಲ್ಲಿರುವ ಜಮೀನು ಲಪಟಾಯಿಸಲು ಕುಟುಂಬಸ್ಥರು ನಡೆದಿರುವ ಸಂಚಿಗೆ ಪ್ರಶಾಂತ್ ಸಾಥ್ ನೀಡಿದ್ದಾರೆಂದು ಪುತ್ರ ನರೇಂದ್ರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಮೂಲಕ ಅಳಲು ತೋಡಿಕೊಂಡಿದ್ದಾರೆ.ಮರಣಕ್ಕೆ ಮುನ್ನಾ ದಿನಾಂಕಕ್ಕೆ ಡೆತ್ ಸರ್ಟಿಫಿಕೇಟ್ ನೀಡಿ ಎಡವಟ್ಟು ಮಾಡಿರುವ ಗ್ರಾಮ ಲೆಕ್ಕಿಗ ಪ್ರಶಾಂತ್ ಮೇಲೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಪ್ರಕರಣ ನಡೆದು 5 ವರ್ಷವಾದರೂ ಕ್ರಮ ಕೈಗೊಳ್ಳದ ವ್ಯವಸ್ಥೆ ವಿರುದ್ದ ನರೇಂದ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಸಧ್ಯ ಪ್ರಶಾಂತ್ ಬೆಂಗಳೂರಿನ ಬಿಎಂಸಿ ಗೆ ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇನ್ನಾದ್ರೂ ಮೈಸೂರಿನ ಜಿಲ್ಲಾಧಿಕಾರಿಗಳು ಪ್ರಶಾಂತ್ ವಿರುದ್ದ ಕ್ರಮ ಕೈಗೊಳ್ಳುವರೇ…?