ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾವೇಶಾತಿ ಪ್ರಾರಂಭ: ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ
- TV10 Kannada Exclusive
- February 26, 2023
- No Comment
- 63
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾವೇಶಾತಿ ಪ್ರಾರಂಭ: ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷ 1 ಲಕ್ಷ ಪ್ರಾವೇಶಾತಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶರಣಪ್ಪ ವಿ. ಹಲಸೆ ಅವರು ತಿಳಿಸಿದರು.
ನಗರದ ಕೆಎಸ್ಓಯು ನ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 1046 ಲರ್ನಿಂಗ್ ಸೆಂಟರ್ ಗಳು ಇದ್ದು, 1050 ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ 900 ಅತಿಥಿ ಉಪನ್ಯಾಸಕರಿದ್ದಾರೆ. ಪ್ರಸ್ತುತ 64 ಕೋರ್ಸ್ ಗಳು ಇವೆ, ಜೊತೆಗೆ ಈ ವರ್ಷದಿಂದ 10 ಹೊಸ ಕೋರ್ಸ್ ಗಳು ಸೇರ್ಪಡೆಯಾಗಲಿವೆ ಎಂದರು.
ಅಂಕಪಟ್ಟಿಯು ಸಂಪೂರ್ಣ ಡಿಜಿಟಲಿಕರಣವಾಗಿದ್ದು, ಪ್ರಾವೇಶಾತಿಯನ್ನು ಆನ್ ಲೈನ್ ಮೂಲಕವೇ ನಡೆಸಲಾಗುತ್ತದೆ. ಸಂಪೂರ್ಣ ಪಾರದರ್ಶಕತೆಗೆ ಅನುಗುಣವಾಗಿ ಶುಲ್ಕವನ್ನು ಆನ್ ಲೈನ್ ಮುಖಾಂತರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲಿಯೇ ಶೈಕ್ಷಣಿಕ ಪ್ರಯೋಜನೆ ಪಡೆದುಕೊಳ್ಳಲು ಸುಸಜ್ಜಿತ ಕಟ್ಟಡಗಳ ಪ್ರಾದೇಶಿಕ ಕೇಂದ್ರಗಳು ಲಭ್ಯವಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಅವಕಾಶ ಕಲ್ಪಿಸಲಾಗಿದೆ. ವಿಶ್ವ ವಿದ್ಯಾನಿಲಯವು ಪ್ಲೇಸ್ಮೆಂಟ್ಸ್ ಮುಖಾಂತರ ನಿಯಮಿತವಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರವೇಶಾತಿ ಸಂಬಂಧ ಭಿತ್ತಿಪತ್ರ ಬಿಡುಗಡೆ ಮಾಡಿದರು.
ಪ್ರಾವೇಶಾತಿಯ ವಿಶೇಷಗಳು
ಯು.ಜಿ.ಸಿ ನಿಯಮಾವಳಿಯಂತೆ ವಿಶ್ವವಿದ್ಯಾನಿಲಯವು ದ್ವಿ ಪದವಿಗೆ ಅವಕಾಶ ಕಲ್ಪಿಸಿದೆ. ಆಟೋ/ಕ್ಯಾಬ್ ಡ್ರೈವರ್ ಗಳ ಕುಟುಂಬಕ್ಕೆ ಬೋಧನಾ ಶುಲ್ಕದಲ್ಲಿ ಶೇ.30% ರಷ್ಟು ವಿನಾಯಿತಿ ಪಡೆಯಬಹುದು. ವಿದ್ಯಾರ್ಥಿಗಳ ಪೋಷಕರು ಕೋವಿಡ್-19 ಸಾಂಕ್ರಮಿಲ ರೋಗದಿಂದ ಮರಣ ಹೊಂದಿದ್ದಲ್ಲಿ, ಪ್ರಾವೇಶಾತಿ ಶುಲ್ಕವನ್ನು 100%ರಷ್ಟು ವಿನಾಯಿತಿಯನ್ನು ಪಡೆಯಬಹುದು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಪ್ರೊ.ಕೆ.ಎಲ್.ಎನ್ ಮೂರ್ತಿ, ಅಧ್ಯಯನ ವಿಭಾಗದ ಡೀನ್ ಪ್ರೊ.ರಾಮನಾಥ್, ಪ್ರಾದೇಶಿಕ ನಿರ್ದೆಶಕರಾದ ಮಿಲನಾ ಆರ್ ಹಾಜರಿದ್ದರು.