ಮಾ.12 ರಂದು ಬೆಂಗಳೂರು – ಮೈಸೂರು ಏಕ್ಸಪ್ರೆಸ್ ಹೆದ್ದಾರಿಯ ಉದ್ಘಾಟನೆಪ್ರಹ್ಲಾದ್ ಜೋಶಿ

ಮಾ.12 ರಂದು ಬೆಂಗಳೂರು – ಮೈಸೂರು ಏಕ್ಸಪ್ರೆಸ್ ಹೆದ್ದಾರಿಯ ಉದ್ಘಾಟನೆಪ್ರಹ್ಲಾದ್ ಜೋಶಿ

ಮಾ.12 ರಂದು ಬೆಂಗಳೂರು – ಮೈಸೂರು ಏಕ್ಸಪ್ರೆಸ್ ಹೆದ್ದಾರಿಯ ಉದ್ಘಾಟನೆಪ್ರಹ್ಲಾದ್ ಜೋಶಿ

ಬೆಂಗಳೂರು – ಮೈಸೂರು ಏಕ್ಸಪ್ರೆಸ್ ಹೈವೇ ಉದ್ಘಾಟನೆ ಹಾಗೂ ಮೈಸೂರು – ಕುಶಲನಗರ ಹೆದ್ದಾರಿಯ ಶಂಕುಸ್ಥಾಪನೆ ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಗೆಜ್ಜಲಗೆರೆ ಕಾಲೋನಿಯಲ್ಲಿ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ರವರು ತಿಳಿಸಿದರು.

ಅವರು ಇಂದು ಗೆಜ್ಜಲಗೆರೆ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು, ಭಾರತದಲ್ಲಿ ಲಾಜಿಸ್ಟಿಕ್ ಕಾಸ್ಟ್ ಹೆಚ್ಚಿದೆ ಉತ್ತಮವಾದ ರಾಷ್ಟೀಯ ಹೆದ್ದಾರಿ, ರೈಲ್ವೆ, ಜಲಸಾರಿಗೆ ಮೂಲಕ ಸಮಯದ ಉಳಿತಾಯ ಮಾಡಿ ಲಾಜಿಸ್ಟಿಕ್ ಕಾಸ್ಟ್ ಕಡಿಮೆ ಮಾಡಬಹುದು ಎಂದರು

ಲಾಜಿಸ್ಟಿಕ್ ಕಾಸ್ಟ್ ಶೇಕಡ 12 ರಷ್ಟು ಇದ್ದು 2030ರ ಒಳಗಾಗಿ ಇದನ್ನು ಶೇಕಡ 7 ರಿಂದ 8 ಕ್ಕೆ ಇಳಿಸಲು .
ರಸ್ತೆ, ಪೋರ್ಟ್ ಗಳು, ವಿಮಾನ ನಿಲ್ದಾಣ, ಇಂಟರ್ ನಲ್ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಕ್ಕಾಗಿ ಆಯವ್ಯಯದಲ್ಲಿ 10 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ ಎಂದರು.

ಬೆಂಗಳೂರು- ಮೈಸೂರು ಏಕ್ಸಪ್ರಸ್ ಹೈವೆಯಿಂದ ಸಂಚಾರದ ಸಮಯ ಉಳಿತಾಯವಾಗಿದ್ದು, 75 ನಿಮಿಷದಲ್ಲಿ ಸಂಚರಿಸಬಹುದು. 3550 ಕೋಟಿ ರೂ ವೆಚ್ಚದಲ್ಲಿ ಮೈಸೂರು ಕುಶಾಲನಗರ ಹೆದ್ದಾರಿಯ ಶಂಕುಸ್ಥಾಪನೆ, ಮೈಸೂರು- ಬೆಂಗಳೂರು ಹೆದ್ದಾರಿಯ ಉದ್ಘಾಟನೆಯನ್ನು ಒಂದೇ ವೇದಿಕೆಯಲ್ಲಿ ನೆರವೇರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಕೆ, ರೇಷ್ಮ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ ನಾರಾಯಣ ಗೌಡ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ
ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *