- March 6, 2023
ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…


ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…

ಮೈಸೂರು,ಮಾ6,Tv10 ಕನ್ನಡ
ಭೂವಿವಾದ ಹಿನ್ನಲೆ ಪೊಲೀಸ್ ಆಧಿಕಾರಿಯೊಬ್ಬರ ಕುಟುಂಬ ಅಮಾಯಕರ ಮುಂದೆ ತೊಡೆ ತಟ್ಟಿ,ಚಪ್ಪಲಿ ತೋರಿಸಿ,ಅವ್ಯಾಚ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ. ಸದರಿ ಜಾಗ ವಿವಾದವಿದ್ದು ನ್ಯಾಯಾಲಯದ ಮೆಟ್ಟಿಲೇರಿದ್ದರೂ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.ಕಮೀಷನರ್ ಕಚೇರಿಯ ವೈರ್ ಲೆಸ್ ವಿಭಾಗದ ಅಧಿಕಾರಿ ಕುಟುಂಬ ಇಂತಹ ದುರ್ವರ್ತನೆ ಪ್ರದರ್ಶಿಸಿದೆ.ಕನಕಗಿರಿ ಸರ್ವೆ ನಂ.123 ಕ್ಕೆ ಸೇರಿದ 5.4 ಗುಂಟೆ ಜಾಗವನ್ನ
2010 ರಲ್ಲಿ ಈ ಜಾಗವನ್ನ ರಾಜೇಶ್ ಪಳನಿ ಎಂಬುವರು ಖರೀದಿಸಿದ್ದಾರೆ.ನಂತರ ಸದರಿ ಜಾಗದ ಮಾಲೀಕತ್ವದ ಬಗ್ಗೆ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿದೆ.
ಜಾಗಕ್ಕೆ ಬರದಂತೆ ಕೋರ್ಟ್‌ನಿಂದ ರಾಜೇಶ್ ಪಳನಿ ತಡೆಯಾಜ್ಞೆ ತಂದಿದ್ದಾರೆ.ತಡೆಯಾಜ್ಞೆ ಇದ್ದರೂ ಕಿಮ್ಮತ್ತು ಕೊಡದೆ
ಜಾಗಕ್ಕೆ ಬಂದು ಮನೆ ಕಟ್ಟುತ್ತಿರುವ ಜನರಿಗೆ ಕಿರೀಕ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.ನ್ಯಾಯ ಕೇಳಲು ಠಾಣೆಗೆ ತೆರಳಿದ ಜನರಿಗೆ ದರ್ಪ ತೋರಿಸಿದ್ದಾರೆ.ನಂತರ ಚೂಡಾಮಣಿ ಪತ್ನಿ ಸದರಿ ಜಾಗಕ್ಕೆ ಬಂದು ತೊಡೆತಟ್ಟಿ ಸವಾಲೆಸೆದಿದ್ದಾರೆ.ಚೂಡಾಮಣಿ ಅತ್ತೆ ಸಹ ಚಪ್ಪಲಿ ತೋರಿಸಿ ದರ್ಪ ತೋರಿಸಿದ ಸನ್ನಿವೇಶಗಳನ್ನ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಕೋರ್ಟ್‌ನಲ್ಲಿ ಸ್ವೇ ಇದ್ರೂ ಪೊಲೀಸ್ ಅಧಿಕಾರಿ ಮೂಗು ತೂರಿಸುತ್ತಿದ್ದಾರೆ.
ಕೋರ್ಟ್‌ನಲ್ಲಿ ಪ್ರಕರಣ ಇತ್ಯಾರ್ಥವಾಗದಿದ್ರೂ ಪೊಲೀಸ್ ಅಧಿಕಾರಿಯ ಕಿರಿಕುಳಕ್ಕೆ ಬೇಸತ್ತಿದ್ದಾರೆ…