- March 7, 2023
PDO ವರದರಾಜು ಲೋಕಾಯುಕ್ತ ಬಲೆಗೆ…E ಸ್ವತ್ತಿಗೆ 3000 ಲಂಚ ಪಡೆಯುವಾಗ ಟ್ರಾಪ್…

PDO ವರದರಾಜು ಲೋಕಾಯುಕ್ತ ಬಲೆಗೆ…E ಸ್ವತ್ತಿಗೆ 3000 ಲಂಚ ಪಡೆಯುವಾಗ ಟ್ರಾಪ್…
ನಂಜನಗೂಡು,ಮಾ7,Tv10 ಕನ್ನಡ
ನಂಜನಗೂಡು ತಾಲೂಕು ಹಲ್ಲರೆ ಗ್ರಾಮ ಪಂಚಾಯ್ತಿ ಪಿಡಿಓ ವರದರಾಜು(29) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಖಾಲಿ ನಿವೇಶನಕ್ಕೆ E ಸ್ವತ್ತು ಮಾಡಿಕೊಡಲು 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಅತಿಕ್ ಉರ್ ರೆಹಮಾನ್ ಎಂಬುವರ ಖಾಲಿ ನಿವೇಶನಕ್ಕೆ E ಸ್ವತ್ತು ಮಾಡಿಕೊಡಲು ಲಂಚ ಕೇಳಿದ್ದಾರೆ.ಹೀಗಾಗಿ ಅತಿಕ್ ಉರ್ ರೆಹಮಾನ್ ರವರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದಾರೆ.ಕೂಡಲೇ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ರವರ ಮಾರ್ಗದರ್ಶನದಲ್ಲಿ
ಮೈಸೂರು ಲೋಕಾಯುಕ್ತ ಇನ್ಸ್ಪೆಕ್ಟರ್ ರವಿಕುಮಾರ್ ಹಾಗೂ ಉಮೇಶ್ ಮಡಿಕೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್
CHC ಗಳಾದ ರಮೇಶ್ ,ಜಗದೀಶ್ CPC ಗಳಾದ
ಪ್ರಕಾಶ್,ಕಾಂತರಾಜ್ ಮಹಿಳಾ ಸಿಬ್ಬಂದಿಗಳಾದ
ಪುಷ್ಪಲತಾ ಹಾಗೂ
ತ್ರಿವೇಣಿ ಚಾಲಕರುಗಳಾದ ಲೋಕೇಶ್, ಮೋಹನ್,
ಇವರುಗಳು ಕಾರ್ಯಚರಣೆ ಯಶಸ್ವಿಗೊಳಿಸಿದ್ದಾರೆ…