ಉರಿಗೌಡ,ನಂಜೇಗೌಡ ಚಿತ್ರ ನಿರ್ಮಾಣ ಕೈಬಿಟ್ಟ ಮುನಿರತ್ನ…ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಫಲಪ್ರದ…
- TV10 Kannada Exclusive
- March 20, 2023
- No Comment
- 131
ಉರಿಗೌಡ,ನಂಜೇಗೌಡ ಚಿತ್ರ ನಿರ್ಮಾಣ ಕೈಬಿಟ್ಟ ಮುನಿರತ್ನ…ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಫಲಪ್ರದ…
ಮಂಡ್ಯ,ಮಾ20,Tv10 ಕನ್ನಡ
ಉರಿಗೌಡ,ನಂಜೇಗೌಡ ವಿವಾದಿತ ಚಿತ್ರ ನಿರ್ಮಾಣವನ್ನ ನಿರ್ಮಾಪಕ ಮುನಿರತ್ನ ಕೈ ಬಿಟ್ಟಿದ್ದಾರೆ.ಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ ರನ್ನ ಇಂದು ಮುನಿರತ್ನ ಭೇಟಿ ಮಾಡಿದ್ದರು.ಸ್ವಾಮೀಜಿಗಳವರ ಮನವಿಗೆ ಸ್ಪಂದಿಸಿದ ಮುನಿರತ್ನ ಚಿತ್ರನಿರ್ಮಾಣ ಯೋಜನೆ ಕೈ ಬಿಟ್ಟಿದ್ದಾರೆ.ಬೆಂಕಿ ಹಚ್ಚಿದ ಸ್ಥಳದಲ್ಲೇ ವಿವಾದ ಶಮನವಾದಂತಾಗಿದೆ.
ಫೆ.14ರಂದು ಸಚಿವ ಅಶ್ವತ್ಥ ನಾರಾಯಣ
ಕೊಮ್ಮೇರಹಳ್ಳಿಯಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಭಾವೋಧ್ವೇಗದ ಭಾಷಣ ಮಾಡಿ
ಟಿಪ್ಪು ಬೇಕಾ? ಉರಿಗೌಡ, ನಂಜೇಗೌಡರು ಬೇಕಾ?
ಟಿಪ್ಪುವನ್ನು ಉರಿಗೌಡ, ನಂಜೇಗೌಡರು ಕಳಿಸಿದಂತೆ ಸಿದ್ದರಾಮಯ್ಯರನ್ನ ಕಳುಹಿಸಿ ಎಂದಿದ್ದರು.
ಇಂದು ಅದೇ ಕೊಮ್ಮೇರಹಳ್ಳಿಯಲ್ಲಿ ಉರಿಗೌಡ, ನಂಜೇಗೌಡರ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ.
ಇತ್ತೀಚೆಗೆ ಸಿನಿಮಾ ಮಾಡೋದಾಗಿ ಘೋಷಿಸಿ, ಮುಹೂರ್ತಕ್ಕೆ ದಿನಾಂಕ ಪ್ರಕಟಿಸಿದ್ದ ಮುನಿರತ್ನ.
ಇಂದು ಕೊಮ್ಮೇರಹಳ್ಳಿಗೆ ಮುನಿರತ್ನರನ್ನ ಕರೆಸಿದ್ದ
ಸ್ವಾಮೀಜಿ ಸಲಹೆಯಂತೆ ಕೊಮ್ಮೇರಹಳ್ಳಿಯಲ್ಲೇ ಸಿನಿಮಾ ಮಾಡುವ ವಿಚಾರ ಕೈಬಿಟ್ಟಿದ್ದಾರೆ.
ಸಚಿವ ಮುನಿರತ್ನ ಜೊತೆ ಮಾತುಕತೆ ಬಳಿಕ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಉರಿಗೌಡ, ದೊಡ್ಡ ನಂಜೇಗೌಡ ಚಿತ್ರ ನಿರ್ಮಾಣ ವಿಚಾರದಲ್ಲಿ ಮಾತುಕತೆ ಮಾಡಿದ್ದೇನೆ.
ಒಕ್ಕಲಿಗ ಜನಾಂಗದ ಅಸ್ಮಿತೆಯಿಂದಾಗಿ ಈ ಚಿತ್ರ ನಿರ್ಮಾಣ ಮಾಡದಂತೆ ಹೇಳಿದ್ದೇನೆ.ಈ ಚಿತ್ರ ನಿರ್ಮಾಣಕ್ಕೆ ಸರಿಯಾದ ಐತಿಹ್ಯ ದಾಖಲೆಗಳಿಲ್ಲ.
ಇದರಿಂದ ನಮ್ಮ ಸಮಾಜದ ಅಸ್ಮಿತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದೇನೆ.ಈ ವಿಚಾರದಲ್ಲಿ ಸಚಿವ ಮುನಿರತ್ನ ಕೂಡ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.ಯಾರಿಗೂ ನೋವುಂಟು ಮಾಡುವ ಉದ್ದೇಶವಿಲ್ಲ ಎಂದು ಅವರು ಕೂಡ ಸ್ಪಷ್ಟಪಡಿಸಿದ್ದಾರೆ.ನಿಮ್ಮ ನಿರ್ದೇಶನದ ಮೇರೆಗೆ ಚಿತ್ರ ನಿರ್ಮಾಣ ಮಾಡುವುದಿಲ್ಲ ಎಂದಿದ್ದಾರೆ.
ಮುನಿರತ್ನ ಭೇಟಿ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ…