ಗುಬ್ಬಚ್ಚಿ ದಿನಾಚರಣೆ…ಮೈಸೂರಿನಲ್ಲಿ ಅರ್ಥಪೂರ್ಣ ಆಚರಣೆ…
- TV10 Kannada Exclusive
- March 20, 2023
- No Comment
- 102
ಗುಬ್ಬಚ್ಚಿ ದಿನಾಚರಣೆ…ಮೈಸೂರಿನಲ್ಲಿ ಅರ್ಥಪೂರ್ಣ ಆಚರಣೆ…
ಮೈಸೂರು,ಮಾ20,Tv10 ಕನ್ನಡ
ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಗುಬ್ಬಚ್ಚಿ ಶಾಲೆಯಲ್ಲಿ ಅಂತರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕೆ.ಎಂ.ಪಿ.ಕೆ.ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಕ್ಕಳಿಗೆ ಪರಿಸರ ರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.ಶಾಲಾ ಮಕ್ಕಳಿಗೆ ಆಹಾರ ನೀಡುವ ಹಾಗೂ ನೀರಿನ ಬಟ್ಟಲುಗಳನ್ನ ವಿತರಿಸುವ ಮೂಲಕ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್ ಚಾಲನೆ ನೀಡಿದರು.ನಂತರ ಮಾತನಾಡಿ
ಅರಣ್ಯವನ್ನು ಮಾನವ ತನ್ನ ಅತಿಕ್ರಮಣ ಪ್ರವೇಶದಿಂದ ಬಳಸುತ್ತಿರುವುದರಿಂದ ಅದರ ಸಂಪತ್ತು ಕಾಲಕ್ರಮೇಣ ನಶಿಸುತ್ತಿದೆ. ಮನುಷ್ಯ ಎಲ್ಲಾ ಪ್ರಾಣಿಗಳಲ್ಲಿಯೇ ಶ್ರೇಷ್ಠ ಪ್ರಾಣಿಯಾಗಿದ್ದು ಆಹಾರವಿಲ್ಲದೆ ಅವನು ಹಲವು ದಿನಗಳವರೆಗೆ ಬದುಕಬಲ್ಲ .ಆದರೆ ಗಾಳಿ ನೀರಿಲ್ಲದೆ ಕ್ಷಣಮಾತ್ರ ಬದುಕಲಾರ. ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದು ಮತ್ತು ಭೂಮಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ನೀರಿನ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಳಬೇಕಿದೆ ಇದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂತತಿ ಉಳಿಯುತ್ತವೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರವಿಚಂದ್ರ, ರಾಕೇಶ್, ಸುಚೇಂದ್ರ,ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ಕುಮಾರ್, ಸಹ ಶಿಕ್ಷಕರಾದ ಚಂಪ ಶ್ರೀ, ದಿವ್ಯ, ರೇಖಾ ಹಾಗೂ ಇನ್ನಿತರರು ಭಾಗಿಯಾಗಿದ್ದರು…