ಗ್ರಾಮ ಪಂಚಾಯತಿ ಸ್ವಚ್ಛತಾಗಾರರು ಆಯುಷ್ಮಾನ ಆರೋಗ್ಯ ಕಾಡ್೯ಗೆ ನೊಂದಣಿ ಮಾಡಿಕೊಳ್ಳಿ: ಡಾ: ಹೆಚ್ ಎನ್ ಗೋಪಾಲಕೃಷ್ಣ

ಗ್ರಾಮ ಪಂಚಾಯತಿ ಸ್ವಚ್ಛತಾಗಾರರು ಆಯುಷ್ಮಾನ ಆರೋಗ್ಯ ಕಾಡ್೯ಗೆ ನೊಂದಣಿ ಮಾಡಿಕೊಳ್ಳಿ: ಡಾ: ಹೆಚ್ ಎನ್ ಗೋಪಾಲಕೃಷ್ಣ

ಗ್ರಾಮ ಪಂಚಾಯತಿ ಸ್ವಚ್ಛತಾಗಾರರು ಆಯುಷ್ಮಾನ ಆರೋಗ್ಯ ಕಾಡ್೯ಗೆ ನೊಂದಣಿ ಮಾಡಿಕೊಳ್ಳಿ: ಡಾ: ಹೆಚ್ ಎನ್ ಗೋಪಾಲಕೃಷ್ಣ

ಮಂಡ್ಯ,ಮಾ,21-ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾಗಾರರು ತಪ್ಪದೇ ಗ್ರಾಮ ಒನ್ ಕೇಂದ್ರದಲ್ಲಿ ಆಯುಷ್ಮಾನ ಆರೋಗ್ಯ ಕಾಡ್೯ಗೆ ನೊಂದಣಿ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ:ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮ್ಯಾನ್ಯುಯಲ್ ‌ಸ್ಕ್ಯಾವೆಂಜರ್ ವೃತ್ತಿ ನಿಷೇಧ ಮತ್ತು ಅವರ ಪುನರ್ ಕಾಯ್ದೆ 2013 ರ ಮತ್ತು ನಿಯಮ 2013 ರನ್ನು ಅನುಷ್ಠಾನ ಗೊಳಿಸಿವ ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ 10ಕ್ಕಿಂತ ಮೇಲ್ಪಟ್ಟ ಹೊರಗುತ್ತಿಗೆ ಕಾರ್ಮಿಕರಿದ್ದಲ್ಲಿ ಇಎಸ್ಐ ಹಾಗೂ 20 ಕ್ಕಿಂತ ಮೇಲ್ಪಟ್ಟ ಕಾರ್ಮಿಕರಿದ್ದಲ್ಲಿ ಪಿ.ಎಫ್ ಅನ್ವಯಿಸುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ವರದಿ ನೀಡಿರುತ್ತಾರೆ. ಆರೋಗ್ಯ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಆಯುಷ್ಮಾನ ಆರೋಗ್ಯ ಯೋಜನೆ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಮಂಡ್ಯ ಟೌನ್ ಕುರುಬರ ಹಾಸ್ಟಲ್ ಹಿಂಭಾಗ ವಿನಾಯಕ ಬಡಾವಣೆಯಲ್ಲಿ ರೈಲ್ವೆ ಇಲಾಖೆಯಿಂದ ಪೌರಕಾರ್ಮಿಕರ ಮನೆ ತೆರವುಗೊಳಿಸಲು ಮುಂದಾಗಿದ್ದು, ಇವರಿಗೆ ಪುನರ್ವಸತಿ ಕಲ್ಪಿಸುವ ಅವಶ್ಯಕತೆ ಇದೆ. ಇಲ್ಲಿ ವಾಸವಿರುವ ಕುಟುಮಬಗಳ ಸರ್ವೆ ನಗರಸಭೆಯಿಂದ ನಡೆಸಲಾಗಿದ್ದು, ಇವರಿಗೆ ಸ್ಲಮ್ ಬೋಡ್೯ನಲ್ಲಿ ಮನೆಗಳಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಿ ಎಂದರು.

ಸಭೆಯಲ್ಲಿ ಜಿಲ್ಲಾ ಜಾಗೃತ ಸಮಿತಿ‌ ಸದಸ್ಯರಾದ ನಂಜುಮಡ ಮೌರ್ಯ, ಪಾಪಮ್ಮ, ಕೃಷ್ಣ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ: ಸಿದ್ದಲಿಂಗೇಶ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Related post

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ…ತಿಂಗಳುಗಳ ನಂತರ ಪ್ರತ್ಯಕ್ಷ…ಪ್ರವಾಸಿಗರು ಖುಷ್…

ಮೈಸೂರು,ಏ29,Tv10 ಕನ್ನಡ ಹಲವು ತಿಂಗಳ ನಂತರ ಪ್ರವಾಸಿಗರ ಕಣ್ಣಿಗೆ ಕಪ್ಪು ಚಿರತೆ ಕಂಡುಬಂದಿದೆ.ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.ಸುಮಾರು 8 ತಿಂಗಳ ಹಿಂದೆ…
ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…

ಮೈಸೂರು,ಏ27,Tv10 ಕನ್ನಡ ಸುಡು ಬಿಸಿಲು ನಾಗರೀಕರನ್ನ ಹೈರಾಣು ಮಾಡಿದೆ.ಬಿಸಿಲಿನ ತಾಪಕ್ಕೆ ಜನತೆ ಪರದಾಡುತ್ತಿದ್ದಾರೆ.ಪ್ರಾಣಿ ಪಕ್ಷಿಗಳಂತೂ ತತ್ತರಿಸುತ್ತಿವೆ.ಇಂತಹ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಪಕ್ಷಿಗಳ ನೆರವಿಗೆ ಧಾವಿಸಿದೆ.ನಗರದ ವಿವಿದೆಡೆ ಪಕ್ಷಿಗಳಿಗಾಗಿ ನೀರಿನ…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು,ಏ26,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿಶೇ.70.14ರಷ್ಟು ಮತದಾನ ನಡೆದಿದೆ.ಸಂಜೆ 6 ಗಂಟೆ ವೇಳೆಗೆ ಮತದಾನ ನಡೆದಿದೆ. ವಿಧಾನಸಭಾ ಕ್ಷೇತ್ರವಾರು ವಿವರ ನರಸಿಂಹರಾಜ ಶೇ.65.40ಕೃಷ್ಣರಾಜ ಶೇ.61.00ಚಾಮರಾಜ ಶೇ.60.67ಚಾಮುಂಡೇಶ್ವರಿ ಶೇ.73.00ಹುಣಸೂರು ಶೇ.76.90ಪಿರಿಯಾಪಟ್ಟಣ…

Leave a Reply

Your email address will not be published. Required fields are marked *