- March 22, 2023
ಮೈಸೂರು:ರೌಡಿ ಶೀಟರ್ ಗಡೀಪಾರು…ನಾಗಮಂಗಲಕ್ಕೆ ರವಾನೆ…

ಮೈಸೂರು,ಮಾ22,Tv10 ಕನ್ನಡ
ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಖಾಕಿ ಪಡೆ ರೌಡಿ ಶೀಟರ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.ಅಹಿತಕರ ಘಟನೆಗಳಿಗೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದ್ದಾರೆ.ಈಗಾಗಲೇ ಹಲವು ರೌಡಿ ಶೀಟರ್ ಗಳಿಗೆ ಗಡೀಪಾರು ಮಾಡಿರುವ ಪೊಲೀಸರು ಮತ್ತೊಬ್ಬ ರೌಡಿಶೀಟರ್ ಗೆ ಗೇಟ್ ಪಾಸ್ ಕೊಟ್ಟಿದ್ದಾರೆ.ಕೆಸರೆ ನಿವಾಸಿ ಸಿದ್ದು.ಆ.ಸಚಿನ್ ಗೆ ಗಡೀಪಾರು ಮಾಡಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶ ಹೊರಡಿಸಿದ್ದಾರೆ.ನಾಲ್ಕು ತಿಂಗಳ ಕಾಲ ನಾಗಮಂಗಲಕ್ಕೆ ಸಿದ್ದು.ಆ.ಸಚಿನ್ ಗೆ ರವಾನಿಸಲಾಗಿದೆ.ನಾಗಮಂಗಲದ ಪೊಲೀಸರ ವಶಕ್ಕೆ ಒಪ್ಪಿಸಿರುವ ನಗರ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.ಚುನಾವಣೆ ಹಿನ್ನಲೆ ಮತ್ತಷ್ಟು ರೌಡಿ ಶೀಟರ್ ಗಳಿಗೆ ಚಾಟಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ…