
ಮಂಡ್ಯಾ ಸ್ಪೋರ್ಟ್ಸ್ ಕ್ಲಬ್ ಮೇಲೆ ಪೊಲೀಸರ ದಾಳಿ…ಪಣಕ್ಕೆ ಇಡಲಾಗಿದ್ದ 18 ಲಕ್ಷ ನಗದು ವಶ…55 ಜೂಜುಕೋರರ ಬಂಧನ…
- Crime
- March 22, 2023
- No Comment
- 383
ಮಂಡ್ಯಾ,ಮಾ22,Tv10 ಕನ್ನಡ
ಯುಗಾದಿ ಹಬ್ಬದ ಸಂಭ್ರಮ ಹಿನ್ನಲೆ ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ಸ್ ಕ್ಲಬ್ ಮೇಲೆ ಮಂಡ್ಯಾ ಪೊಲೀಸರು ದಾಳಿ ನಡೆಸಿ 55 ಜೂಜುಕೋರರನ್ನ ಬಂಧಿಸಿದ್ದು ಪಣಕ್ಕೆ ಇಡಲಾಗಿದ್ದ 18,00,500/- ರೂ ನಗದು ವಶಪಡಿಸಿಕೊಂಡಿದ್ದಾರೆ.ಮಂಡ್ಯಾ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ ನಡೆಸಲಾಗಿದೆ.ಯುಗಾದಿ ಹಿನ್ನಲೆ ಜೂಜಾಟ ನಡೆಸಬಾರದೆಂದು ಖಡಕ್ ವಾರ್ನಿಂಗ್ ಮಾಡಿದ್ದರೂ ಲೆಕ್ಕಿಸದೆ ಮಂಡ್ಯಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಇಸ್ಪೀಟ್ ನಲ್ಲಿ ಜೂಜುಕೋರರು ಮುಳುಗಿದ್ದರು.ಖಚಿತ ಮಾಹಿತಿ ಅರಿತ ಮಂಡ್ಯಾ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದು 55 ಮಂದಿ ಜೂಜುಕೋರರನ್ನ ಅರೆಸ್ಟ್ ಮಾಡಿದ್ದಾರೆ.ಮಂಡ್ಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಹಾಗೂ ಅಡಿಷನಲ್ ಎಸ್ಪಿ ತಿಮ್ಮಯ್ಯ ನೇತೃತ್ವದಲ್ಲಿ ಡಿವೈಎಸ್ಪಿ ಓಂಪ್ರಕಾಶ್ ಉಸ್ತುವಾರಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅರುಣ್.ಎಲ್ ಪಿಎಸ್ಸೈ ಗಳಾದ ದೀಕ್ಷಿತ್ ಮತ್ತುವರ್ಷಗೌಡ ರವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ…