
ಯುವ ಭಾರತ್ ಸಂಘಟನೆಯಿಂದ ಕ್ರಾಂತಿಕಾರಿ ಹೋರಾಟಗಾರರ ಬಲಿದಾನ ದಿವಸ್ ಆಚರಣೆ…
- TV10 Kannada Exclusive
- March 23, 2023
- No Comment
- 108

ಯುವ ಭಾರತ್ ಸಂಘಟನೆಯಿಂದ ಕ್ರಾಂತಿಕಾರಿ ಹೋರಾಟಗಾರರ ಬಲಿದಾನ ದಿವಸ್ ಆಚರಣೆ…
ಮೈಸೂರು,ಮಾ23,Tv10 ಕನ್ನಡ
ಯುವಭಾರತ್ ಸಂಘಟನೆಯ ವತಿಯಿಂದ ಇಂದು ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಬಲಿದಾನ ದಿವಸ್ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ನಾರಾಯಣಸ್ವಾಮಿ ರಸ್ತೆಯಲ್ಲಿರುವ ಸ್ವತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಜೈ ಹಿಂದ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರಾಂತಿಕಾರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ
ಮಾತನಾಡಿದ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಮೈಸೂರಿನಲ್ಲಿ ಹೆಚ್ಚು ಹೋರಾಟಗಳು ನಡೆದಿವೆ.ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರಬಿಂದು ಸುಬ್ಬರಾಯನ ಕೆರೆ. ಕ್ರಾಂತಿಕಾರಿ ಭಗತ್ ಸಿಂಗ್ ರವರು ರವರ ಹೋರಾಟದ ಕಿಚ್ಚು ಲಕ್ಷಾಂತರ ಭಾರತೀಯರನ್ನ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೆಣೆ ನೀಡಿತು. ಭಾರತೀಯರು ಶಾಂತಿ ಮಾರ್ಗದ ಹೋರಾಟದ ಜೊತೆಯಲ್ಲೇ ಬ್ರಿಟೀಷರ ವಿರುದ್ಧ ಕ್ರಾಂತಿ ಮಾರ್ಗ ಹಿಡಿದರೇ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ ಎಂದು ಕರೆ ನೀಡಿದ್ದರೆಂದು ಸ್ಮರಿಸಿದರು.
ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿ ಮಂಜು ರವರು ಮಾತನಾಡಿ ಭಗತ್ ಸಿಂಗ್ ರಾಜಗುರು ಸುಖದೇವ್ ರವರ ಬಲಿದಾನ ತ್ಯಾಗದಿಂದಾಗಿ ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು, ನಾವು ಇಂದಿಗೆ ನೆಮ್ಮದಿಯಾಗಿದ್ದೇವೆ ಎಂದರೆ ಭಗತ್ ಸಿಂಗ್ ರವರಂತಹ ವೀರಹುತಾತ್ಮರೇ ಕಾರಣ, ಅಂತ ಮಹನೀಯರ ಸ್ಮರಣೆಯನ್ನು ಮನೆಮನಗಳಲ್ಲಿ ಯುವಪೀಳಿಗೆಯೊಂದಿಗೆ ಸ್ಮರಿಸಬೇಕು ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಮೂಡ ಸದಸ್ಯರಾದ ನವೀನ್ ಕುಮಾರ್, ಅಜಯ್ ಶಾಸ್ತ್ರಿ, 23ನೇ ವಾರ್ಡಿನ ಅಧ್ಯಕ್ಷರಾದ ಸುರೇಂದ್ರ, ಯುವ ಭಾರತ್ ಸಂಘಟನೆಯ ಸಂಚಾಲಕರಾದ ಶರತ್ ಭಂಡಾರಿ, ಲಿಂಗರಾಜು, ವಿಘ್ನೇಶ್ವರ ಭಟ್, ಸುದರ್ಶನ್, ಸುಚೇಂದ್ರ, ಶ್ರೀನಿವಾಸ್, ವಿಜಯಾನಂದ, ಆನಂದ್, ಸುಕನ್ಯ, ಗೀತಾ, ಪದ್ಮ, ದಿವ್ಯ, ನವೀನ್, ಚರಣ್, ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..