ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಕಾಮಗಾರಿ…ರಸ್ತೆ ಅಗೆದು ನಿರ್ಲಕ್ಷಿಸಿರುವ ವಾ.ವಿ.ನೀ.ಸ.ಮಂಡಳಿ ಅಧಿಕಾರಿಗಳು…
- TV10 Kannada Exclusive
- March 29, 2023
- No Comment
- 73
ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಕಾಮಗಾರಿ…ರಸ್ತೆ ಅಗೆದು ನಿರ್ಲಕ್ಷಿಸಿರುವ ವಾ.ವಿ.ನೀ.ಸ.ಮಂಡಳಿ ಅಧಿಕಾರಿಗಳು…
ಮೈಸೂರು,ಮಾ29,Tv10 ಕನ್ನಡ
ಪೋಲಾಗುತ್ತಿರುವ ನೀರು ಸ್ಥಗಿತಗೊಳಿಸಲು ಆರಂಭಿಸಲಾದ ಕಾಮಗಾರಿ ಜಡ್ಡು ಹಿಡಿದು ಸಾರ್ವಜನಿಕರಿಗೆ ಕಿರಿಕಿರಿ ತರುತ್ತಿರುವ ಪ್ರಕರಣವೊಂದು ಯಾದವಗಿರಿಯಲ್ಲಿ ಬೆಳಕಿಗೆ ಬಂದಿದೆ.ಚರ್ಚ್ ಬಳಿ ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿತ್ತು.ಸಾರ್ವಜನಿಕರ ದೂರಿಗೆ ಸ್ಪಂದಿಸಿದ ವಾಣಿವಿಲಾಸ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪೋಲಾಗುತ್ತಿದ್ದ ನೀರನ್ನ ಸ್ಥಗಿತಗೊಳಿಸಲು ಕಳೆದ ನಾಲ್ಕು ದಿನಗಳ ಹಿಂದೆಯೇ ಕಾಮಗಾರಿ ಕೈಗೊಳ್ಳಲಾಗಿದೆ.ರಸ್ತೆಯನ್ನ ಅಗೆದ ಸಿಬ್ಬಂದಿಗಳು ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷಿಸಿದ್ದಾರೆ.ಒಂದೆಡೆ ನೀರು ಸಹ ಪೋಲಾಗುತ್ತಿದೆ.ಮತ್ತೊಂದೆಡೆ ರಸ್ತೆಯನ್ನೂ ಸಹ ಅಗೆದು ಹಳ್ಳಮಾಡಲಾಗಿದೆ.ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ.ವಾಣಿವಿಲಾಸ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ.ಇದರಿಂದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.ಕಿರಿಕಿರಿ ಅನುಭವಿಸುತ್ತಿರುವ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಇನ್ನಾದ್ರೂ ಕಾಮಗಾರಿ ಪೂರ್ಣಗೊಳಿಸಲೆಂದು ಆಗ್ರಹಿಸಿದ್ದಾರೆ…