.ಆರ್.ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿ…ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ…
- Politics
- April 3, 2023
- No Comment
- 72
ಕೆ.ಆರ್.ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿ…ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ…
ಮೈಸೂರು,ಏ3,Tv10 ಕನ್ನಡ
ಕೆ.ಆರ್ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿ ನಡೆಯುತ್ತಿದೆ.ಟಿಕೆಟ್ ಗಾಗಿ ಆಕಾಂಕ್ಷಿಗಳು ನಡೆಸುತ್ತಿರುವ ಕಸರತ್ತು ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ.ಯಾರ ಪರವಾಗಿ ಪ್ರಚಾರಕ್ಕೆ ಇಳಿಯಬೇಕೆಂಬ ವಿಚಾರದಲ್ಲಿ ಸಂಧಿಗ್ಧ ಪರಿಸ್ಥಿತಿಗೆ ತಲುಪಿದ್ದಾರೆ.ಒಂದೆಡೆ ಬಿಜೆಪಿಯಲ್ಲಿ ಹಾಲಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಡಾ ಮಾಜಿ ಅಧ್ಯಕ್ಷ ರಾಜೀವ್ ನಡುವೆ ಪೈಪೋಟಿ ನಡೆಯುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಮೂವರ ನಡುವೆ ಕಿತ್ತಾಟ ಶುರುವಾಗಿದೆ.ಟಿಕೆಟ್ ಗಾಗಿ ತಮ್ಮ ನೆಚ್ಚಿನ ನಾಯಕರ ಬೆನ್ನು ಬಿದ್ದಿರುವ ಆಕಾಂಕ್ಷಿಗಳು ಶತಾತ ಗತಾಯ ಟಿಕೆಟ್ ಪಡೆಯಲು ಪಟ್ಟು ಹಿಡಿದು ಕುಳಿತಿದ್ದಾರೆ.ಕೈ ಆಕಾಂಕ್ಷಿಗಳಾದ
ಮಾಜಿ ಶಾಸಕ ಎಂ.ಕೆ ಸೋಮಶೇಖರ್, ನವೀನ್ ಕುಮಾರ್, ಮಾಜಿ ನಗರಪಾಲಿಕೆ ಸದಸ್ಯ ಪ್ರದೀಪ್ ಕುಮಾರ್ ಸ್ಪರ್ಧೆಗೆ ಇಳಿದಿದ್ದಾರೆ.
ಚುನಾವಣೆ ಸನಿಹಬರುತ್ತಿದ್ದಂತೆ ಮತದಾರರನ್ನ ಸೆಳೆಯಲು ಕೈ ಆಕಾಂಕ್ಷಿಗ ಫೀಲ್ಡಿಗಿಳಿದಿದ್ದಾರೆ.
ಮತದಾರರನ್ನ ಸೆಳೆಯಲು ಹಲವು ಕಾರ್ಯಕ್ರಮಗಳ ಮೂಲಕ ಆಕರ್ಷಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಾಗಿರುವ ಕ್ಷೇತ್ರ ಇದಾಗಿದೆ.
ಈಗಾಗಲೇ ಎರಡು ಬಾರಿ ಗೆದ್ದಿರುವ ಸೋಮಶೇಖರ್‌ಗೆ ನವೀನ್ ಕುಮಾರ್ ಹಾಗೂ ಪ್ರದೀಪ್ ಕುಮಾರ್ ಸ್ಪರ್ಧೆ ನೀಡುತ್ತಿದ್ದಾರೆ.
ಮೂರು ಸಮುದಾಯಕ್ಕೆ ಸೇರಿದ ಆಕಾಂಕ್ಷಿಗಳಲ್ಲಿ ಕಾಂಪಿಟಿಷನ್ ಶುರುವಾಗಿದೆ.
ಕುರುಬ ಸಮುದಾಯಕ್ಕೆ ಸೇರಿದ ಸೋಮಶೇಖರ್, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರದೀಪ್ ಕುಮಾರ್, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನವೀನ್ ಕುಮಾರ್ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ.
ಕಮಲ ಟಿಕೆಟ್‌ಗಾಗಿ ಶಾಸಕ ರಾಮದಾಸ್, ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ನಡುವೆ ಈಗಾಗಲೇ ಪೈಪೋಟಿ ಶುರುವಾಗಿದೆ.ಈ ಬೆಳವಣಿಗರ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿ ಗೊಂದಲ ಮೂಡಿಸಿದೆ.ಸಧ್ಯ ಕೆ.ಆರ್ ಕ್ಷೇತ್ರ ಕಗ್ಗಂಟಾಗಿದೆ.
ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಕೊಡಿ ಎಂದು ಕ್ಷೇತ್ರ ಮತದಾರರು ಒತ್ತಾಯಿಸಿದ್ದಾರೆ.
ಇತ್ತ ಕಾಂಗ್ರೆಸ್ ಮತದಾರರಲ್ಲಿ ಯಾವುದೇ ವಿರೋಧವಿಲ್ಲದಿದ್ದರು ಆಕಾಂಕ್ಷಿಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ.
ಚುನಾವಣೆ ಘೋಷಣೆಯಾದ್ರು, ಎರಡು ಪಕ್ಷಗಳಿಂದ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.ಕಾರ್ಯಕರ್ತರಂತೂ
ಗೊಂದಲಕ್ಕೆ ಸಿಲುಕಿದ್ದಾರೆ…