
ಚುನಾವಣೆ 2023…ಮೈಸೂರಲ್ಲಿ ನೀರಸ ವಾತಾವರಣ…ಫೀಲ್ಡ್ ಗೆ ಇಳಿಯದ ಆಕಾಂಕ್ಷಿಗಳು…
- Politics
- April 6, 2023
- No Comment
- 130
ಮೈಸೂರು,ಏ5,Tv10 ಕನ್ನಡ
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ.ಕೆಲವೆಡೆ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಚುರುಕಿನಿಂದ ಓಡಾಡುತ್ತಿದ್ದಾರೆ.ಆದ್ರೆ ಮೈಸೂರು
ಜಿಲ್ಲೆಯಲ್ಲಿ ನೀರಸ ವಾತಾವರಣ ನಿರ್ಮಾಣವಾಗಿದೆ.
ಚುನಾವಣಾ ರಂಗು ಇನ್ನೂ ಕಳೆಗಟ್ಟಿಲ್ಲ.ಪ್ರಮುಖ ಪಕ್ಷಗಳು ತಮ್ಮ
ಅಭ್ಯರ್ಥಿಗಳನ್ನ ಘೋಷಣೆ ಮಾಡದ ಹಿನ್ನಲೆ ನೀರಸ ವಾತಾವರಣ ಕಂಡುಬರುತ್ತಿದೆ.ಈ ಹಿನ್ನಲೆ
ಆಕಾಂಕ್ಷಿಗಳಲ್ಲೂ ಗೊಂದಲವಾಗಿದೆ ಕಾರ್ಯಕರ್ತರಲ್ಲೂ ಗೊಂದಲ ಮೂಡಿದೆ.
ನಾಯಕರ ವಿಳಂಬ ನೀತಿಗೆ ಬೇಸತ್ತಿರುವ ಮುಖಂಡರು, ಕಾರ್ಯಕರ್ತರು ಸೈಲೆಂಟಾಗಿ ಕುಳಿತಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದರು ಆಕಾಂಕ್ಷಿಗಳು ಫೀಲ್ಡಿಗಿಳಿಯಲು ಮೀನಾಮೇಷ ಎಣಿಸುತ್ತಿದ್ದಾರೆ.ಕೆಲವು ಕ್ಷೇತ್ರಗಳನ್ನ ಹೊರತುಪಡಿಸಿ ಬಹುತೇಕ ಕ್ಷೇತ್ರಗಳ ಆಕಾಂಕ್ಷಿಗಳು ಮೌನದಿಂದ ಮುಂದಿನ ಬೆಖವಣಿಗೆಗೆ ಕಾದಿದ್ದಾರೆ.ಅಲ್ಲದೆ
ಕಾರ್ಯಕರ್ತರೊಂದಿಗೆ ಬೆರೆಯಲು ಆಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದಾರೆ.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಘೋಷಣೆ ವಿಳಂಬವಾದ ಕಾರಣ ಕಾರ್ಯಕರ್ತರು.
ಯಾರಿಗೆ ಬೆಂಬಲಿಸಬೇಕೆಂದು ಗೊಂದಲಕ್ಕೆ ಸಿಲುಕಿದ್ದಾರೆ.
ಚುನಾವಣೆ ಕೇವಲ 35 ದಿನಗಳು ಮಾತ್ರ ಬಾಕಿ ಇದೆ.ಜಿಲ್ಲೆಯಲ್ಲಿ ಕೆಲವೇ ಕೆಲವು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳು ಫಿಕ್ಸ್ ಆಗಿದೆ.
ಜೆಡಿಎಸ್, ಕಾಂಗ್ರೆಸ್ ನಲ್ಲಿ ಮಾತ್ರ ಕೆಲವೆಡೆ ಅಭ್ಯರ್ಥಿ ಘೋಷಣೆಯಾಗಿದೆ.
ಚಾಮರಾಜ, ಚಾಮುಂಡೇಶ್ವರಿ, ಕೃಷ್ಣರಾಜಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ನಿಗದಿಯಾಗಿಲ್ಲ.
ಜೆಡಿಎಸ್ ನಲ್ಲಿ ಚಾಮರಾಜ, ಎನ್ ಆರ್, ಹೆಚ್ ಡಿ ಕೋಟೆ, ನಂಜನಗೂಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಾಕಿ ಉಳಿದಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದರು ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ.
ಜೆಡಿಎಸ್ ಕೆಲ ಕ್ಷೇತ್ರದಲ್ಲಿ ಸಂಘಟನೆಗೆ ಸಮಯ ಕಡಿಮೆ ಹಿನ್ನೆಲೆ ಸ್ಪರ್ಧೆಗೆ ಆಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದಾರೆ.ಕಡಿಮೆ ಸಮಯದಲ್ಲಿ ಸಂಘಟನೆ ಕಠಿಣ ಎಂದು ಕೆಲವೆಡೆ ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ.
ಪ್ರಮುಖ ಮೂರು ಪಕ್ಷಗಳಲ್ಲೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಚುನಾವಣಾ ರಂಗು ಬಾಡಿಹೋಗಿದೆ…