ಬಗೆಹರಿಯದ ಕೆ.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ಸಮಸ್ಯೆ…ಹೊಸಮುಖಕ್ಕೆ ಮಣೆ ಹಾಕಲಿದೆಯಾ ಹೈಕಮಾಂಡ್…?
- Politics
- April 15, 2023
- No Comment
- 58
ಮೈಸೂರು,ಏ14,Tv10 ಕನ್ನಡ
ಮೈಸೂರು ಕೆ.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಹಾಲಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಮಾಜಿ ಮುಡಾ ಅಧ್ಯಕ್ಷ ರಾಜೀವ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ.ಟಿಕೆಟ್ ಗಾಗಿ ಇಬ್ಬರೂ ಕೇಂದ್ರದ ನಾಯಕರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.ಎರಡು ಪಟ್ಟಿ ಬಿಡುಗಡೆಯಾದರೂ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿಲ್ಲ.ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಮೂರನೆ ವ್ಯಕ್ತಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ.ಸಧ್ಯ ಶ್ರೀವತ್ಸ ಹೆಸರೂ ಸಹ ಮುಂಚೂಣಿಯಲ್ಲಿದೆ.ಇಬ್ಬರ ನಡುವಿನ ಪೈಪೋಟಿಯಿಂದ ಹೈಕಮಾಂಡ್ ಹೊಸಮುಖಕ್ಕೆ ಮಣೆ ಹಾಕಲಿದೆ ಎಂಬ ಚರ್ಚೆ ಸಹ ನಡೆಯುತ್ತಿದೆ.
ಈ ಬಾರಿಯೂ ಹಾಲಿ ಶಾಸಕ ಎಸ್. ಎ. ರಾಮದಾಸ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿತ್ತು.ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಹೈ ಕಮಾಂಡ್ ಕೆ ಆರ್ ಕ್ಷೇತ್ರಕ್ಕೆ ಯಾರ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.
ಕೃಷ್ಣರಾಜ ಕ್ಷೇತ್ರದ ಈ ಬಾರಿಯ ಟಿಕೆಟ್ ಗಾಗಿ ಮುಡಾ ಮಾಜಿ ಅಧ್ಯಕ್ಷ ಹೆಚ್. ವಿ. ರಾಜೀವ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ರಾಮದಾಸ್ ಅವರಿಗೆ ಅವರ ಸಮುದಾಯದವರೆ ಈ ಸಾರಿ ಟಿಕಟ್ ನೀಡದಂತೆ ಆಗ್ರಹಿಸುತ್ತಿದ್ದಾರೆ.
ಮತ್ತೊಂದೆಡೆ ಹಲವು ಮತದಾರರು ರಾಮದಾಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರಿಗೆ ಟಿಕೆಟ್ ನೀಡಬೇಡಿ ಎನ್ನುತ್ತಿದ್ದಾರೆ.
ಈ ಮಾಹಿತಿ ಎಲ್ಲವೂ ಬಿಜೆಪಿ ಹೈ ಕಮಾಂಡ್ ಗೆ ತಲುಪಿದೆ. ಹಾಗಾಗಿ ಬಿಜೆಪಿ ವರಿಷ್ಠರು ಈ ಚುನಾವಣೆಯಲ್ಲಿ ರಾಮದಾಸ್ ಗೆ ಟಿಕೆಟ್ ನೀಡಬೇಕೊ ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಕೈಗೊಂಡಿದ್ದಾರೆ.
ಕೆ. ಆರ್. ಕ್ಷೇತ್ರಕ್ಕೆ ಈ ಬಾರಿಯೂ ರಾಮದಾಸ್ ಗೆ ನೀಡಿದರೆ ಹೇಗೇ, ರಾಜೀವ್ ಗೆ ನೀಡಿದರೆ ಏನಾಗಲಿದೆ ಎಂಬೆಲ್ಲ ಲೆಕ್ಕಾಚಾರವನ್ನು ಬಿಜೆಪಿಗರು ಲೆಕ್ಕ ಹಾಕುತ್ತಿದ್ದಾರೆ.
ಬಿಜೆಪಿ ವಲಯದಲ್ಲಿ ಇಬ್ಬರಿಗೂ ಟಿಕೆಟ್ ಬೇಡ ಹೊಸಬರಿಗೆ ಟಿಕೆಟ್ ನೀಡಿ ಎಂದು ಹೈ ಕಮಾಂಡ್ ಗೆ ಮನವಿ ಮಾಡಿದ್ದಾರೆಂತೆ.
ಹಾಗಾಗಿ ಬಿಜೆಪಿಯ ವರಿಷ್ಠರು ಈ ನಿಟ್ಟಿನಲ್ಲಿ ಅಳೆದು ತೂಗುತ್ತಿದ್ದಾರೆ.
ರಾಮದಾಸ್ ಹಾಗೂ ರಾಜೀವ್ ಇವರಿಬ್ಬರ ಟಿಕೆಟ್ ಶೀತಲ ಸಮರದಲ್ಲಿ ಮೂರನೇ ಅವರ ಪಾಲಾಗಲಿದೆಯೇ ? ಒಟ್ಟಾರೆ ಕೆ.ಆರ್.ಕ್ಷೇತ್ರ ಬಿಜೆಪಿಯಲ್ಲಿ ತಳಮಳ ಹೆಚ್ಚಾಗುತ್ತಲೇ ಇದೆ.ಹೈಕಮಾಂಡ್ ಯಾರಿಗೆ ಗ್ರೀನ್ ಸಿಗ್ನಲ್ ನೀಡಲಿದೆಯೋ ಕುತೂಹಲಕ್ಕೆ ಕಾರಣವಾಗಿದೆ…