ಮೈಸೂರು:ಲಿವಿಂಗ್ ಟುಗೆದರ್ ನಲ್ಲಿದ್ದ ವಿಚ್ಛೇದಿತ ಮಹಿಳೆ ಕೊಲೆ…ಪ್ರಿಯಕರನ ವಿಚಾರಣೆ…
- CrimeMysore
- April 15, 2023
- No Comment
- 210
ಮೈಸೂರು,ಏ15,Tv10 ಕನ್ನಡ
ಪತಿಯಿಂದ ವಿಚ್ಛೇದನ ಪಡೆದು ಪ್ದಿಯಕರನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ ಭೀಕರವಾಗಿ ಕೊಲೆಯಾಗಿದ್ದಾಳೆ.ಮೈಸೂರಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಂದಗೋಕುಲ ಬಡಾವಣೆಯಲ್ಲಿ ಘಟನೆ ನಡೆದಿದೆ.ಸೌಮ್ಯ(27) ಮೃತ ದುರ್ದೈವಿ.ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯಕರನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಪತಿಯಿಂದ ವಿಚ್ಛೇದನ ಪಡೆದಿದ್ದ ಸೌಮ್ಯ ಕಳೆದ ಟೈಲರಿಂಗ್ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಳು.ಕ್ಯಾಬ್ ಡ್ರೈವರ್ ರಮೇಶ್ ಎಂಬಾತನ ಪರಿಚಯವಾದ ನಂತರ ಆತನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದಳು.ರಮೇಶ್ ಜೊತೆ ವಿವಾಹವಾಗಲು ಸಿದ್ದತೆ ನಡೆಸಿದ್ದಳು.ಇಂದು ಬೆಳಿಗ್ಗೆ ಸೌಮ್ಯ ರಕ್ತದ ಮಡುವಿನಲ್ಲಿ ಕಂಡು ಬಂದಿದ್ದಾಳೆ.ತಲೆಗೆ ಬಲವಾದ ಆಯುಧದಿಂದ ಹಲ್ಲೆ ನಡೆಸಿರುವುದು ಕಂಡುಬಂದಿದೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಿಯಕರ ರಮೇಶ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ…