
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆದರಿ ಓಡುವಾಗ ಕೆಸರಿನಲ್ಲಿ ಸಿಲುಕಿ ಆದಿವಾಸಿ ಸಾವು…ಮೀನು ಹಿಡಿಯುವಾಗ ದುರ್ಘಟನೆ…
- CrimeMysore
- April 19, 2023
- No Comment
- 100
ಹೆಚ್.ಡಿ.ಕೋಟೆ,ಏ19,Tv10,ಕನ್ನಡ
ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಆದಿವಾಸಿ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ಹೆಚ್.ಡಿ.ಕೋಟೆಯ ಬಳ್ಳೆಹಾಡಿಯಲ್ಲಿ ನಡೆದಿದೆ. ಮಾಸ್ತಿ (30) ಕೆಸರಿಗೆ ಸುಲುಕಿ ಮೃತಪಟ್ಟ ದುರ್ದೈವಿ.
ನಿನ್ನೆ ಸಂಜೆ ಬಳ್ಳೆ ಹಾಡಿಯ ಐದು ಮಂದಿ ಕಬಿನಿ ಹಿನ್ನೀರಿನ ನಾಗರಹೊಳೆ ಅರಣ್ಯದಲ್ಲಿ ಮೀನು ಹಿಡಿಯಲು ತೆರಳಿದ್ದರು.
ಅದೇ ಮಾರ್ಗವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂಧಿಗಳ ಬಂದರೆಂಬ ಬೆದರಿಕೆಯಿಂದ ಭಯಭೀತರಾಗಿ ಸ್ಥಳದಿಂದ ಮೀನುಗಾರರು ಪಾಲಾಯನ ಮಾಡಿದ್ದಾರೆ.ಈ ವೇಳೆ ಮಾಸ್ತಿ ಕೆಸರಿಗೆ ಸಿಲುಕಿ ಹೊರಬರಲಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಳ್ಳೆ ಹಾಡಿಯ ಹಳೇ ಮಾಸ್ತಿಗುಡಿ ಬಳಿ ಅವಘಡ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…