
ನಿವೃತ್ತಿಯಾಗುವ ನಾಯಕ ಬೇಕಾ…ಭವಿಷ್ಯದ ನಾಯಕ ಬೇಕಾ…?ವರುಣಾದಲ್ಲಿ ಅಮಿತ್ ಷಾ ಪ್ರಶ್ನೆ…
- MysorePolitics
- May 2, 2023
- No Comment
- 82
ಮೈಸೂರು,ಮೇ2,Tv10 ಕನ್ನಡ
ನಿಮಗೆ ನಿವೃತ್ತಿಯಾಗುವ ನಾಯಕ ಬೇಕಾ…ಭವಿಷ್ಯದ ನಾಯಕ ಬೇಕಾ ಎಂದು ವರುಣಾ ಕ್ಷೇತ್ರದ ಜನತೆಗೆ ಅಮಿತ್ ಷಾ ಪ್ರಶ್ನಿಸಿದರು.ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಮಾಡಿದ ಅಮಿತ್ ಷಾ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಇದು ಮಹತ್ವಪೂರ್ಣ ಚುನಾವಣೆ.ವರುಣ ರಾಜ್ಯದಲ್ಲೇ ಅತ್ಯಂತ ಪ್ರಮುಖ ಚುನಾವಣೆ.
ಸೋಮಣ್ಣ ಅವರನ್ನು ಗೆಲ್ಲಿಸಿ ಅವರನ್ನು ಮುಂದೆ ಅವರನ್ನು ದೊಡ್ಡ ವ್ಯಕ್ತಿ ಮಾಡುತ್ತೇವೆ.
ಸೋಮಣ್ಣ ರೇವಣ್ಣ ಅವರಿಗೆ ಕೊಡುವ ಒಂದು ಮತ ಕರ್ನಾಟಕವನ್ನು ಸುರಕ್ಷಿತವಾಗಿಡುತ್ತದೆ.
ಕರ್ನಾಟಕವನ್ನು ಸಮೃದ್ದ ಸುರಕ್ಷಿತ ಮಾಡುವುದು ಮೋದಿಗೆ ಮಾತ್ರ ಸಾಧ್ಯ ಎಂದು ವಿಶ್ವಾಸದಿಂದ ನುಡಿದರು.ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಗೆದ್ದರೆ ಫಿಎಫ್‌ಐ ಬ್ಯಾನ್ ವಾಪಸ್ಸು ತೆಗೆಯುತ್ತಾರೆ.
ಕಾಂಗ್ರೆಸ್ ಪಕ್ಷವು ಕೇಂದ್ರಕ್ಕೆ ಎಟಿಎಂ ಆಗಿದೆ.ಸಿದ್ದರಾಮಯ್ಯ 5 ವರ್ಷದಲ್ಲಿ ಭ್ರಷ್ಟಾಚಾರ ಬಿಟ್ಟು ಏನು ಮಾಡಲಿಲ್ಲ.
ಲಿಂಗಾಯತ ಸಮಾಜ ಭ್ರಷ್ಟಾಚಾರ ತಂದಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ.
ಸಿದ್ದರಾಮಯ್ಯ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಮಾಡಿದ ಅಪಮಾನ.
ಕಾಂಗ್ರೆಸ್ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಅವರನ್ನು ತೆಗೆದು ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿತ್ತು.
ಪ್ರತಿಬಾರಿ ನೀವು ಏಕೆ ಕ್ಷೇತ್ರವನ್ನು ಹುಡುಕುತ್ತೀರಾ ? ಎಂದು ಪ್ರಶ್ನಿಸಿದ ಅಮಿತ್ ಷಾ
ಒಂದು ಸಲ ವರುಣ ಒಂದು ಸಲ ಚಾಮುಂಡೇಶ್ವರಿ ಬಾದಾಮಿ
ಏಕೆ ಕ್ಷೇತ್ರ ಬದಲಾಯಿಸುತ್ತೀರಾ.
ಅಲ್ಲಿ ಅಭಿವೃದ್ಧಿ ಮಾಡಲ್ಲ ಅದಕ್ಕೆ ಜನ ಅಲ್ಲಿಂದ ಓಡಿಸುತ್ತಾರೆ.
ನಿವೃತ್ತಿಯಾಗುವ ನಾಯಕ ಬೇಕಾ ಅಥವಾ ಭವಿಷ್ಯದ ನಾಯಕ ಬೇಕಾ ಎಂದು ವರುಣಾ ಜನತೆಗೆ ಪ್ರಶ್ನಿಸಿದರು.ಮುಸ್ಲಿಂ ಮೀಸಲಾತಿ ವಾಪಸ್ಸು ಪಡೆದಿದ್ದು ಸರಿನಾ ? ಇಲ್ಲವಾ ?ಕಾಂಗ್ರೆಸ್ ಸರ್ಕಾರ ಬಂದರೆ ಲಿಂಗಾಯತರ ಮೀಸಲಾತಿ ವಾಪಸ್ಸು ಪಡೆಯುತ್ತಾರೆ.
ಎಸ್ ಟಿ ಸಮುದಾಯದ ಮೀಸಲಾತಿ ಹೊರಟು ಹೋಗುತ್ತದೆ.
ದಲಿತರಿಗೆ ನೀಡಿರುವ ಮೀಸಲಾತಿ ತೆಗೆದುಕೊಳ್ಳುತ್ತಾರೆ.
ನರೇಂದ್ರ ಮೋದಿ ಈ ದೇಶವನ್ನು ಸುರಕ್ಷಿತವಾಗಿ ಮಾಡುತ್ತಿದ್ದಾರೆ.
ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತಿದ್ದಾರೆ.ವರುಣದಲ್ಲಿ ಸಿದ್ದರಾಮಯ್ಯಗೆ ಏಕೆ ಮತ ಹಾಕಬೇಕು..?
ಸೋಮಣ್ಣ ಅವರನ್ನು ಗೆಲ್ಲಿಸಿದರೆ ರಾಜ್ಯದಲ್ಲೇ ವರುಣ ಮಾದರಿ ಮಾಡುತ್ತೇನೆ ಎಂದು ಭರವಸೆ ನೀಡಿದರು…