
ಭಜರಂಗದಳ ನಿಷೇಧ ಪ್ರಸ್ತಾವನೆ…ಹನುಮಾನ್ ಚಾಲೀಸ ಪಠಿಸುವ ಮೂಲಕ ವಿರೋಧ…
- Temples
- May 5, 2023
- No Comment
- 127

ಮೈಸೂರು,ಮೇ5,Tv10 ಕನ್ನಡ
ಭಜರಂಗದಳ ಸಂಘಟನೆ ನಿಷೇಧಿಸುವ ಪ್ರಸ್ತಾಪಕ್ಕೆ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾಡಿರುವ ಘೋಷಣೆಯನ್ನ ಖಂಡಿಸಿ ಮೈಸೂರಿನ ಹಿಂದೂ ಪರ ಸಂಘಟನೆಗಳು ಹನುಮಾನ್ ಚಾಲೀಸ ಪಠಿಸುವ ಮೂಲಕ ವಿರೋಧಿಸಿವೆ.ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಡಿ ದೇವರಾಜ ಅರಸು ರಸ್ತೆಯಲ್ಲಿರುವ ತ್ರಿಪುರ ಬೈರವಿ ಮಠದ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಲಾಗಿದೆ.
ಇದೇ ರೀತಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲು ಬಜರಂಗದಳ ಕರೆ ನೀಡಿತ್ತು. ತ್ರಿಪುರ ಭೈರವಿ ಮಠದ ಶ್ರೀ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿಜಿಯವರು ಸಾನಿಧ್ಯ ವಹಿಸಿದ್ದರು.
ಸತತವಾಗಿ ಒಂದು ಗಂಟೆ ಹನುಮಾನ್ ಚಾಲೀಸಾ ಪಠಿಸಲಾಯಿತು. ನಾನು ಭಜರಂಗಿ ಎಂಬ ಘೋಷಣೆಯನ್ನು ಮೊಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ರಕ್ಷಣಾ ವೇದಿಕೆ, ಮೈಸೂರು ಹನುಮಂತೊತ್ಸವ ಸಮಿತಿ, ಶ್ರೀರಾಮ ಸೇನೆ, ಯುವ ಬ್ರಿಗೇಡ್, ವಿಶ್ವ ಹಿಂದೂ ಪರಿಷತ್, ವೀರ ಸಾವರ್ಕರ್ ಯುವ ಬಳಗ, ರಾಜಸ್ತಾನ್ ಮಾರ್ವಾಡಿ ಸಂಘ, ಪ್ರಶಾಂತ್ ಗೌಡ ಸ್ನೇಹ ಬಳಗ, ಹಿಂದೂ ಹೆಜ್ಜೆ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.
ಹಿಂದೂಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಮೈಕಾ ಪ್ರೇಮ್ ಕುಮಾರ್, ಸಹ ಸಂಚಾಲಕರಾದ ಸಂಜಯ್, ರಾಕೇಶ್ ಭಟ್, ಮುಖಂಡರಾದ ಬಿ.ಎಸ್. ಪ್ರಶಾಂತ್, ಪ್ರಶಾಂತ್ ಗೌಡ, ಜೀವನ್, ವಿಕ್ರಂ ಅಯ್ಯಂಗಾರ್, ಜಗದೀಶ್ ಹೆಬ್ಬಾರ್, ಅನುಜ್ ಸರಸ್ವತ್, ಪ್ರದಿಶ್, ಜಯಸಿಂಹ, ಸಂದೇಶ ಪವಾರ್, ಪ್ರತಾಪ್ ದಟ್ಟಗಳ್ಳಿ, ಶ್ರೀನಿವಾಸ್ ಪ್ರಸಾದ್, ಹರೀಶ್ ಗೌಡ, VPF ಸುಧೀಂದ್ರ, ಮಲಮ್ ಸಿಂಗ್, ಗಿರೀಶ್, ಮಹೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು