ರಿವರ್ ಸ್ವಿಮ್ಮಿಂಗ್ ಸ್ಪರ್ಧೆ…ಮೈಸೂರು ವಿವಿ ಈಜುಪಟುಗಳ ಸಾಧನೆ…
- MysoreTV10 Kannada Exclusive
- May 28, 2023
- No Comment
- 155
ಮಡಿಕೇರಿ,ಮೇ28,Tv10 ಕನ್ನಡ
ಮಡಿಕೇರಿ ನಾಪೋಕ್ಲು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜು ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.ಕಕ್ಕಬ್ಬೆ ಹೊಳೆಯಲ್ಲಿ ನಡೆದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ.ಬೆಂಗಳೂರು,ಮಂಗಳೂರು,ಮೈಸೂರಿನಿಂದ ಆಗಮಿಸಿದ್ದ 80 ಈಜುಪಟುಗಳ ಪೈಕಿ ಮೈಸೂರಿನ ಪಟುಗಳು ಬಹುಮಾನಗಳನ್ನ ಬಾಚಿದ್ದಾರೆ.
15 ವರ್ಷದೊಳಗಿನ ವಿಭಾಗದಲ್ಲಿ ರಾಹುಲ್.ಕೆ 400 ಮೀಟರ್,200 ಮೀಟರ್ ಹಾಗೂ 50 ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಶ್ರೀಹರಿ 50 ಮೀಟರ್ ಹಾಗೂ 100 ಮೀಟರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶ್ರೇಯಾಂಕ್ 200 ಮೀ,100 ಮೀಟರ್ ನಲ್ಲಿ ತೃತೀಯ ಸ್ಥಾನ,ನಿಶಾಂತ್.ಜಿ.ಗೌಡ ರವರು 400 ಮೀ ಹಾಗೂ 50 ಮೀ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚೇತನಾ 100 ಮೀಟರ್ ಹಾಗೂ 50 ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಮೈಸೂರಿಗೆ ಕೀರ್ತಿ ತಂದಿದ್ದಾರೆ.ಈಜುಪಟುಗಳಿಗೆ ಆಲ್ಬರ್ಟ್ ಸೆಬಾಸ್ಟಿನ್ ಮಾರ್ಗದರ್ಶನದಲ್ಲಿ ಮನೋಜ್ ತರಬೇತಿ ನೀಡಿದ್ದಾರೆ…