ಇಂದಿನಿಂದ ಶಾಲೆ ಆರಂಭ…ಹೂವು,ಸಿಹಿ, ಪಠ್ಯಪುಸ್ತಕ ವಿತರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಕರು…
- MysoreTV10 Kannada Exclusive
- May 31, 2023
- No Comment
- 70
ಮೈಸೂರು,ಮೇ31,Tv10 ಕನ್ನಡ
ಇಂದಿನಿಂದ ಶಾಲೆಗಳು ಪುನರಾರಂಭವಾಗಿದೆ.ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ
ವಿದ್ಯಾರ್ಥಿಗಳಿಗೆ ಹೂವು ಎರಚಿ, ಸಿಹಿ ನೀಡಿ ಸ್ವಾಗತಿಸಲಾಗಿದೆ.
ಶಾಲೆಗಳನ್ನು ಮಾವಿನ ತಳಿರು ಮತ್ತು ಹೂವುಗಳಿಂದ ಅಲಂಕರಿಸಿ, ಶಿಕ್ಷಕರು ಹೂ ಹಿಡಿದು ಶಾಲಾ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ಇಲ್ಲಿನ ಅಕ್ಕನ ಬಳಗ ಶಾಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ರಂಗೋಲಿಯ ಚಿತ್ತಾರದೊಂದಿಗೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ತಿಲಕ ಇಟ್ಟು, ಹೂವು ನೀಡಿ, ಸಿಹಿ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಕ್ಕಳು ಸಂತೋಷ ಹಾಗೂ ಖುಷಿಯಿಂದ ಶಾಲೆಗೆ ಆಗಮಿಸಬೇಕು ಶಿಕ್ಷಕರು ಕೂಡ ಮಕ್ಕಳ ಎಳೆ ಮನಸ್ಸನ್ನು ಅರಿತುಕೊಂಡು ವಿದ್ಯಾದಾನ ಮಾಡಬೇಕು, ಮಕ್ಕಳು ಸಂಪೂರ್ಣವಾಗಿ ವಿದ್ಯಾರ್ಜನೆ ಎಲ್ಲಿ ತೊಡಗಿಸಿಕೊಳ್ಳಬೇಕು, ಬಾಹ್ಯ ಆಕರ್ಷಣೆಗಳಿಗೆ ಒಳಗಾಗಬಾರದು, ವಿದ್ಯೆಯೇ ಜೊತೆ ಸಂಸ್ಕೃತಿ ಕಲೆಯನ್ನು ಅವ್ಯಸವನ್ನಾಗಿ ಮಾಡಿಕೊಳ್ಳಬೇಕು. ಆಗ ಜೀವನ ಪರಿಪೂರ್ಣವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು
ಇದೇ ಸಂದರ್ಭದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿನ್ನ ಬೆಳ್ಳಿ ವ್ಯಾಪಾರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಶಿವಯ್ಯ, ಶಿಲ್ಪ, ನಾಗರತ್ನ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು…