ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಿನಿವಿಧಾನ ಸೌಧ ಕ್ರಿಸ್ ಮಸ್ ಟ್ರೀ…ತೆರವುಗೊಳಿಸುವಂತೆ ಬರೆದ ತಹಸೀಲ್ದಾರ್ ಪತ್ರಕ್ಕೆ ಡೋಂಟ್ ಕೇರ್…
- MysoreTV10 Kannada Exclusive
- June 3, 2023
- No Comment
- 119

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಿನಿವಿಧಾನ ಸೌಧ ಕ್ರಿಸ್ ಮಸ್ ಟ್ರೀ…ತೆರವುಗೊಳಿಸುವಂತೆ ಬರೆದ ತಹಸೀಲ್ದಾರ್ ಪತ್ರಕ್ಕೆ ಡೋಂಟ್ ಕೇರ್…

ಮೈಸೂರು,ಜೂ3,Tv10 ಕನ್ನಡ
ಮೈಸೂರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬೆಳೆದಿರುವ ಕ್ರಿಸ್ ಮಸ್ ಟ್ರೀ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಮರಕ್ಕೆ ಗೆದ್ದಲು ಹಿಡಿದು ಶಿಥಿಲವಾಗಿದ್ದು ಯಾವ ಸಮಯದಲ್ಲಿ ಬೇಕಾದರೂ ಉರುಳಿ ಬೀಳುವ ಸಾಧ್ಯತೆ ಇದೆ.ಮಿನಿ ವಿಧಾನಸೌಧ ಕಚೇರಿಗೆ ಪ್ರತಿದಿನ ನೂರಾರು ಮಂದಿ ಬರುತ್ತಾರೆ.ಮರದ ಸಮೀಪವೇ ಓಡಾಡುತ್ತಾರೆ.ವಾಹನಗಳನ್ನ ಪಾರ್ಕ್ ಮಾಡುತ್ತಾರೆ.ಈಗಾಗಲೇ ಮಳೆಗಾಲ ಆರಂಭವಾಗುತ್ತಿದೆ.ಬಿರುಗಾಳಿ ಸಮೇತ ಮಳೆ ಬೀಳುವ ಸಾಧ್ಯತೆ ಇದೆ.ಕಚೇರಿ ಸಮಯದಲ್ಲಿ ಮರ ಉರುಳಿ ಬಿದ್ದಲ್ಲಿ ಭಾರಿ ಅನಾಹುತ ನಡೆಯುವ ಸಂಭವವಿದೆ.ಹೀಗಾಗಿ ಶಿಥಿಲಗೊಂಡ ಮರವನ್ನ ತೆರವುಗೊಳಿಸುವಂತೆ ತಹಸೀಲ್ದಾರ್ ಗಿರೀಶ್ ರವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಪತ್ರ ಬರೆದು 9 ದಿನಗಳಾಗಿದೆ.ಇದುವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ.ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ..?.ಅನಾಹುತ ಸಂಭಿಸುವ ಮುನ್ನ ಮರ ತೆರುವುಗೊಳಿಸಬೆಕಾಗಿದೆ.ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ…