ಸರ್ಕಾರಿ ಕಾಲೇಜು ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ…ಪ್ರಾಶುಪಾಲನ ವಿರುದ್ದ ಸಿಡಿದೆದ್ದ ಹಳೇ ವಿಧ್ಯಾರ್ಥಿಗಳು…
- TV10 Kannada Exclusive
- June 17, 2023
- No Comment
- 109

ಸರ್ಕಾರಿ ಕಾಲೇಜು ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ…ಪ್ರಾಶುಪಾಲನ ವಿರುದ್ದ ಸಿಡಿದೆದ್ದ ಹಳೇ ವಿಧ್ಯಾರ್ಥಿಗಳು…

ಹುಣಸೂರು,ಜೂ17,Tv10 ಕನ್ನಡ
ಸರ್ಕಾರಿ ಕಾಲೇಜಿನ ಆವರಣದಲ್ಲಿ ಸಜ್ಜುಗೊಳಿಸಲಾದ ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ ನಡೆದಿದ್ದು ಪ್ರಾಂಶುಪಾಲನ ವಿರುದ್ದ ಹಳೇ ವಿಧ್ಯಾರ್ಥಿಗಳು ಸಿಡಿದೆದ್ದ ಘಟನೆ ಹುಣಸೂರಿನಲ್ಲಿ ನಡೆದಿದೆ.ಪ್ರಾಂಶುಪಾಲನ ವಿರುದ್ದ ಕ್ರಮ ಕೈಗೊಳ್ಳುವಂತೆ ಹಳೇ ವಿಧ್ಯಾರ್ಥಿಗಳು ಆಗ್ರಹಿಸಿದ್ದಾರೆ.ಹಾಗೂ ನಾಮಫಲಕ ಬದಲಿಸಿದ ಆಗುಂತಕ ವ್ಯಕ್ತಿಗಳಿಗೆ ಹಳೇ ವಿಧ್ಯಾರ್ಥಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ
ಹುಣಸೂರಿನ ಬೈಪಾಸ್ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಸರ್ಕಾರಿ ಕಾಲೇಜಿನ ಆವರಣದಲ್ಲಿ ಮೂರು ವರ್ಷಗಳ ಹಿಂದೆ ಹಳೇ ವಿಧ್ಯಾರ್ಥಿಗಳು ಸಂಘ ಸ್ಥಾಪನೆ ಮಾಡಿ ಮುಂಬರುವ ವಿಧ್ಯಾರ್ಥಿಗಳಿಗೆ ಅನುಕೂಲವಾಗಲೆಂದು ತಮ್ಮ ಸ್ವಂತ ಖರ್ಚಿನಲ್ಲಿ ಕ್ಯಾಂಟೀನ್ ತೆರೆದಿದ್ದರು.ಸ್ನೇಹಜೀವಿ ಎಂಬ ಹೆಸರಿನಲ್ಲಿ ಕ್ಯಾಂಟೀನ್ ತೆರೆಯಲಾಗಿತ್ತು.ಇದೀಗ ಧಿಢೀರ್ ಎಂದು ಬಂದ ಕೆಲವು ಆಗುಂತಕ ವ್ಯಕ್ತಿಗಳು ಕ್ಯಾಂಟೀನ್ ನಾಮಫಲಕವನ್ನ ಕಿತ್ತುಹಾಕಿ ಜಿ.ಡಿ.ಹೆಚ್.ಕ್ಯಾಂಟೀನ್ ಎಂಬ ನಾಮಫಲಕ ಅಳವಡಿಸಿದ್ದಾರೆ.ಈ ಬಗ್ಗೆ ಸಿಡಿದೆದ್ದ ಹಳೇ ವಿಧ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಪ್ರಾಂಶುಪಾಲ ವೆಂಕಟೇಶಯ್ಯ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದಾರೆ.ಅಲ್ಲದೆ ಇತ್ತೀಚೆಗೆ ನೂತನವಾಗಿ ಶಾಸಕರಾಗಿ ಚುನಾಯಿತರಾದ ಜಿ.ಡಿ.ಹರೀಶ್ ಗೌಡ ಹೆಸರು ಪ್ರಸ್ತಾಪಿಸಿರುವ ಹಳೇ ವಿಧ್ಯಾರ್ಥಿಗಳು ಎಚ್ಚರಿಕೆ ಕೊಟ್ಟಿದ್ದಾರೆ.ಈ ಸಂಭಂಧ ಹುಣಸೂರು ಠಾಣೆಗೆ ದೂರು ಸಲ್ಲಿಸಿರುವ ಹಳೇ ವಿಧ್ಯಾರ್ಥಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ…