–ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ*
- MysoreTV10 Kannada Exclusive
- June 28, 2023
- No Comment
- 122

ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ…
ಮೈಸೂರು,ಜೂ28,
ಸುಮಾರು 6 ತಿಂಗಳ ಹಿಂದೆ ನಿರಂತರ ಮಳೆಗೆ ಕುಸಿದು ಬಿದ್ದಿದ್ದ ಅರಮನೆ ಭಧ್ರಕೋಟೆ ಗೋಡೆಗೆ ಕಾಯಕಲ್ಪ ಒದಗಿಸಲಾಗಿದೆ.ಕಾಮಗಾರಿ ಪೂರ್ಣಗೊಂಡಿದ್ದು ಯಥಾಸ್ಥಿತಿಗೆ ತರಲಾಗಿದೆ.ಅರಮನೆ ಉತ್ತರ ದಿಕ್ಕಿ ಜಯಮಾರ್ತಾಂಡ ಧ್ವಾರ ಹಾಗೂ ಕೋಟೆ ಮಾರಮ್ಮ ದೇವಸ್ಥಾನದ ನಡುವಿನ ಗೋಡೆಯ ಒಂದು ಭಾಗದಲ್ಲಿ ಗೋಡೆ ಕುಸಿದಿತ್ತು.ಅರಮನೆ ಆಡಳಿತ ಮಂಡಳಿ ವತಿಯಿಂದ ಪುನರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.ನುರಿತ ಇಂಜಿನಿಯರ್ ಗಳ ಉಸ್ತುವಾರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.ಪಾರಂಪರಿಕತೆಗೆ ಆಧ್ಯತೆ ನೀಡಿ ಕಾಮಗಾರಿ ಆರಂಭಿಸಲಾಗಿತ್ತು.6 ತಿಂಗಳ ಕಾಲ ನಡೆದ ಕಾಮಗಾರಿ ಪೂರ್ಣಗೊಂಡಿದೆ.ಪಾರಂಪರಿಕತೆ ಉಳಿಸಿಕೊಂಡೇ ಗೋಡೆ ಕಾಮಗಾರಿಯನ್ನ ಪೂರ್ಣಗೊಳಿಸಲಾಗಿದೆ.ಅರಮನೆ ಭದ್ರಕೋಟೆ ಇದೀಗ ಸುಭದ್ರವಾಗಿದೆ…