ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಮಂಡ್ಯ ಸಂಸದೆ ಸುಮಲತಾ ಸಭೆ…
- MysoreTV10 Kannada Exclusive
- July 6, 2023
- No Comment
- 74
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಮಂಡ್ಯ ಸಂಸದೆ ಸುಮಲತಾ ಸಭೆ…
ಮಂಡ್ಯ,ಜು6,Tv10 ಕನ್ನಡ ಬೃಂದಾವನದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಕಾವೇರಿ ನೀರಾವರಿ ನಿಗಮ ಇಂಜಿನಿಯರ್ ಗಳ ಜೊತೆ ಇಂದು ಮಂಡ್ಯ ಜಿಲ್ಲೆ ಸಂಸದೆ ಸುಮಲತಾ ಸಭೆ ನಡೆಸಿದರು.
ಕೆ.ಆರ್.ಎಸ್ ಜಲಾಶಯದ ವೀಕ್ಷಣೆ ಮಾಡಿ ಹಲವು ವರ್ಷಗಳ ನಂತರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿರುವುದು ಆತಂಕವಾಗಿದೆ, ರೈತರ ಮುಂಗಾರು ಬೆಳೆ ಬೆಳೆಯಲು ನೀರಿಲ್ಲದೆ ಇರುವ ಸಂದರ್ಭದಲ್ಲಿ ತ.ನಾಡಿಗೆ ನೀರು ಬಿಡುವುದೆಲ್ಲಿ ಎಂದರು.
ನಂತರ ಕಾವೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಸಂಸದೆ ಸುಮಲತಾ ಅಧಿಕಾರಿಗಳಿಂದ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆಹಾಕಿದರು.
ಸದ್ಯ ಜಲಾಶಯದಲ್ಲಿ 78.78 ಅಡಿ ನೀರಿದೆ.
ಸದ್ಯ ಜಲಾಶಯದಲ್ಲಿ ಇರುವ ನೀರು ಅಗಸ್ಟ್ 12 ರ ವರೆಗೂ ಮಳೆಯಾಗದಿದ್ದರು ಕುಡಿಯುವ ನೀರಿಗೆ ಸಮಸ್ಯೆ ಇಲ್ಲ, ಹೊಸದಾಗಿ ಬೆಳೆ ನಾಟಿ ಮಾಡದಂತೆ ಸೂಚನೆ ನೀಡಿದ್ದೇವೆ ಎಂದರು.
ಒಂದು ವೇಳೆ ಮಳೆ ಬಾರದಿದ್ದರೆ ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ 50-50 ಸೂತ್ರ ಅನುಸರಿಬೇಕಾಗುತ್ತೆ.
ಒಳಹರಿವು ಹರಿವಿನ ಪ್ರಮಾಣದಲ್ಲಿ ಅರ್ಧದಷ್ಟು ನೀರನ್ನು ತಮಿಳುನಾಡಿಗೆ ಹರಿಸಬೇಕಾಗುತ್ತೆ.
ಸದ್ಯ ಮಳೆಯಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ ಇದೀಗ ಹೇಮಾವತಿ ಜಲಾಶಯ ಭಾಗದಲ್ಲಿ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿ
ಕೆ.ಆರ್.ಎಸ್ ಅಣೆಕಟ್ಟೆ ನಲ್ಲಿ ಬಿರುಕಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಅಲ್ಲಲ್ಲಿ ಬಿರುಕು ಬಿಡುತ್ತಿರುತ್ತೆ ಅದನ್ನ ಅಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದಾರೆ.
ಪ್ರೋಟೋಕಾಲ್ ಪ್ರಕಾರ ನಿರ್ವಹಣೆ ಮಾಡುತ್ತಿದ್ದಾರೆ.
ಕೆ.ಆರ್.ಎಸ್ ಸುತ್ತಮುತ್ತ ಬೆಟ್ಟಗಳಲ್ಲಿ ಬ್ಲಾಸ್ಟಿಂಗ್ ಆಗದಂತೆ ಅಧಿಕಾರಿಗಳು ಗಮನವಹಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಕೆ.ಆರ್.ಎಸ್ ಅಣೆಕಟ್ಟೆ ಸೇರಿದಂತೆ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಅಧಿಕಾರಿಗಳೆ ಶಾಮೀಲಾಗಿದ್ದಾರೆ ಎಂಬ ಆರೋಪಕ್ಕೆ ಪ್ರತುಕ್ರಿಯಿಸಿ ಟ್ರಯಲ್ ಬ್ಲಾಸ್ಟ್ ಮಾಡಲು ಸ್ಥಳಿಯ ರೈತರ ವಿರೋಧ ಇದೆ.
ಸ್ಥಳೀಯ ರೈತರು ಒಪ್ಪಿಕೊಂಡರೆ ಟ್ರಯಲ್ ಬ್ಲಾಸ್ಟ್ ಮಾಡಬಹುದು.
ಕೇಂದ್ರದಿಂದ ತಂಡ ಬಂದಿತ್ತು, ಅಲ್ಲಿಂದ ಬರುವ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಂದಲೆ ಮಾಹಿತಿ ಸಂಗ್ರಹಿಸುತ್ತಾರೆ.ಇವರು ಕೊಡುವ ರಿಪೋರ್ಟ್ ನಿಂದಲೆ ಟ್ರಯಲ್ ಬ್ಲಾಸ್ಟ್ ಮಾಡಬೇಕಾಗುತ್ತೆ.
ಗಣಿಗಾರಿಕೆ ಅನುಮತಿ ಇರುವುದಕ್ಕಿಂದ ಹೆಚ್ಚು ಆಳದಲ್ಲಿ ಮಾಡಲಾಗಿದೆ, ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿದರೆ ಇದರಿಂದ ಸರಿಯಾದ ಉತ್ತರ ಸಿಗಲ್ಲ, ಇಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಕೊಡಬೇಕು,ಆದ್ರೆ ಅದು ಆಗುತ್ತಿಲ್ಲ, ಕಣ್ಮುಂದೆ ನಡೆಯುತ್ತಿದ್ರು ಇಲ್ಲ ಎಂದು ಅಂತ ಮಾಹಿತಿ ನೀಡುತ್ತಾರೆ.ಅಕ್ರಮ ನಿಲ್ಲಿಸಬೇಕಾದ್ರೆ ಎಲ್ಲಾ ಜನಪ್ರತಿನಿಧಿಗಳು ಕೈಜೋಡಿಸಬೇಕು, ಈ ಬಗ್ಗೆ ನನ್ನ ಹೋರಾಟ ಇರುತ್ತದೆ.
ಈ ನನ್ನ ಹೋರಾಟದಿಂದ ಸಂಪೂರ್ಣವಾಹಿ ಗಣಿಗಾರಿಕೆ ನಿಂತಿದೆ ಎಂದು ಹೇಳಲು ಸಾಧ್ಯವಿಲ್ಲ ಸಂಸದೆ ಸುಮಲತಾ ಸ್ಪಷ್ಟಪಡಿಸಿದರು.ಭ್ರಷ್ಟಚಾರ ಯಾರೇ ಮಾಡಿದ್ರು ತಪ್ಪೆ.
ಬಿಜೆಪಿ ಸರ್ಕಾರ ಇದ್ದ ಸಂಧರ್ಭದಲ್ಲಿ ಕಾಂಗ್ರೆಸ್ ನವರು ಆರೋಪ ಮಾಡಿದ್ರು.ಆದರೆ ಈ ಬಗ್ಗೆ ದಾಖಲೆ ಕೊಡಲಿಲ್ಲ.ಆರೋಪ ಮಾಡುವಾಗ ದಾಖಲೆ ಕೊಡಲಿ.ತಪ್ಪು ನಡೆಯುತ್ತಿದೆ ಎಂದಾಗ ಸಂಬಂಧ ಪಟ್ಟ ಇಲಾಖೆಗೆ ದೂರು ಕೊಡಿ.ಭ್ರಷ್ಟಾಚಾರ ವಿಚಾರವನ್ನ ರಾಜಕೀಯವಾಗಿ ಬಳಸಿಕೊಳ್ಳುವ ಅಸ್ತ್ರವಾಗಬಾರದು. ಯಾರು ಸುಮ್ಮನೆ ಮಾತನಾಡಬಾರದು.ದಾಖಲೆ ಇದ್ದರೆ ಬಿಡುಗಡೆ ಮಾಡಲಿ.ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡಲಿ ಎಂದು ಟಾಂಗ್ ಕೊಟ್ಟರು…