ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಮಹಿಳೆಯರಿಗೆ ಸೆಲ್ಫಿ ಸ್ಪರ್ಧೆ…ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ…

ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಮಹಿಳೆಯರಿಗೆ ಸೆಲ್ಫಿ ಸ್ಪರ್ಧೆ…ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ…

  • Temples
  • August 21, 2023
  • No Comment
  • 166

ಮೈಸೂರು,ಆ21,Tv10 ಕನ್ನಡ

ಆಗಸ್ಟ್ 25 ರಂದು ಮಹಿಳೆಯರು ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ.ಸಂಭ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಕೆ.ಎಂ.ಪಿ.ಕೆ.ಟ್ರಸ್ಟ್ ಸ್ಪರ್ಧೆ ಏರ್ಪಡಿಸಿದೆ.ಅಲಂಕರಿಸಲಾದ ವರಮಹಾಲಕ್ಷಿ ಜೊತೆ ಸೆಲ್ಫಿ ಫೋಟೋ ಸ್ಪರ್ಧೆ ಏರ್ಪಡಿಸಿದೆ.ಹಬ್ಬದ ಸಂಭ್ರಮವನ್ನ ಸ್ಪರ್ಧೆಯ ಮೂಲಕವೂ ಹಂಚಿಕೊಳ್ಳುವ ಭಾಗ್ಯ ಮಹಿಳೆಯರಿಗೆ ಕಲ್ಪಿಸಲಾಗಿದೆ.ಆನ್ ಲೈನ್ ಮೂಲಕ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನ ಕಳುಹಿಸಬಹುದಾಗಿದೆ.ಈ ಅಂಗವಾಗಿ ಇಂದು ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಪ್ರಚಾರ ಸಾಮಗ್ರಿಗಳನ್ನು ಉಡುಪಿಯ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಬಿಡುಗಡೆಗೊಳಿಸಿದ್ದಾರೆ.ನಂತರ ಮಾತನಾಡಿ
ಹಬ್ಬದಂತಹ ಧಾರ್ಮಿಕ ಆಚರಣೆಗಳು ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಮುನ್ನುಡಿ ಬರೆಯುತ್ತದೆ. ಮನೆಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸಿಕೊಳ್ಳಲು ಪರಂಪರೆ ಉಳಿಯಲು ಪ್ರೇರೇಪಣೆ ನೀಡುತ್ತವೆ. ಇಂತಹ ಹಬ್ಬಗಳ ಆಚರಣೆ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ.
ಹಬ್ಬದ ಆಚರಣೆಗಳಲ್ಲಿ ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಹೆಚ್ಚಿನ ಮಟ್ಟದಲ್ಲಿ ಆಸಕ್ತಿ ಹಾಗೂ ವಿನೂತನ ಅಭಿರುಚಿ ಮೂಡಲು ಒತ್ತಾಸೆಯಾಗಿ ನಿಲ್ಲುತ್ತದೆ. ಸ್ಪರ್ಧಾತ್ಮಕ ಶಕ್ತಿ ಮಕ್ಕಳಲ್ಲಿ ಬೆಳೆದರೆ ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ವೇದಿಕೆಗಳು ಅವಶ್ಯಕ ಎಂದರು..

ನಂತರ ಮಾತನಾಡಿದ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ಆನ್ಲೈನ್ ಮೂಲಕ ಮನೆಯಲ್ಲಿ ಅಲಂಕರಿಸಿ ಕೂರಿಸಿರುವ ವರಮಹಾಲಕ್ಷ್ಮಿ ದೇವಿಯ ಜೊತೆಗೆ ಫೋಟೋವನ್ನು ಕಳಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು, ನೊಂದಣಿ ಶುಲ್ಕ 100ರೂ
ಇರುತ್ತದೆ, ಆಗಸ್ಟ್ 26ರ ಬೆಳಿಗ್ಗೆ 11 ಗಂಟೆಯ ಒಳಗಡೆ 9880752727 ದೂರವಣಿಗೆ ವರಮಹಾಲಕ್ಷ್ಮಿ ಜೊತೆ ಫೋಟೋ ಮತ್ತು ವಿಳಾಸ ಕಳಿಸಿಕೊಡಬೇಕು. ಅತ್ಯುತ್ತಮ 10 ಚಿತ್ರಕ್ಕೆ ಬಹುಮಾನ ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಸ್ಪರ್ಧೆಯ ವಿವರ ತಿಳಿಸಿದರು.

ಚಾತುರ್ಮಾಸ ಸಮಿತಿಯ ಕಾರ್ಯಧ್ಯಕ್ಷ ರವಿ ಶಾಸ್ತ್ರಿ, ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ರೂಪದರ್ಶಿ ತನಿಷ್ಕಮೂರ್ತಿ, ಮುಖಂಡರಾದ ಲಕ್ಷ್ಮೀದೇವಿ, ಜ್ಯೋತಿ ರೇಚಣ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ಎಂ ಪಂಚಾಕ್ಷರಿ, ಸವಿತಾ ಘಾಟ್ಕೆ, ನಾಗಮಣಿ, ರುಕ್ಮಿಣಿ, ಸುಚೀಂದ್ರ, ಚರಣ್, ದರ್ಶನ್, ಹಾಗೂ ಇನ್ನಿತರರು ಈ ಸಂಧರ್ಭದಲ್ಲಿ ಹಾಜರಿದ್ದರು…

Spread the love

Related post

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ… ಹುಣಸೂರು,ಅ18,Tv10 ಕನ್ನಡ ಹಳೇ ವೈಷಮ್ಯ ಹಿನ್ನಲೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೃಷಿ ಕೂಲಿ ಕಾರ್ಮಿಕ…
ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಅ17,Tv10 ಕನ್ನಡ ಬಾಡಿಗೆ ನೆಪದಲ್ಲಿ ಚಾಲಕನಿಗೆ ಹಲ್ಲೆ ನಡೆಸಿ ಆಟೋ,ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾದ ಪ್ರಮುಖ ಆರೋಪಿಯನ್ನ ಬಂಧಿಸುವಲ್ಲಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಯಿಂದ ಆಟೋ…
ಮುಡಾ ಅಧ್ಯಕ್ಷ ಕೆ.ಮರಿಗೌಡ ರಾಜಿನಾಮೆ…ಆಡಳಿತಾಧಿಕಾರಿ ನೇಮಕಕ್ಕೆ ನಿರ್ಧಾರ…

ಮುಡಾ ಅಧ್ಯಕ್ಷ ಕೆ.ಮರಿಗೌಡ ರಾಜಿನಾಮೆ…ಆಡಳಿತಾಧಿಕಾರಿ ನೇಮಕಕ್ಕೆ ನಿರ್ಧಾರ…

ಮೈಸೂರು,ಅ16,Tv10 ಕನ್ನಡ ಮುಡಾದ ಅಧ್ಯಕ್ಷ ಕೆ ಮರೀಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಬೆಂಗಳೂರಿನ ನಗರಾಭಿವೃದ್ಧಿ ಸಚಿವಾಲಯದಲ್ಲಿ ರಾಜೀನಾಮೆ ನೀಡಿದ್ದಾರೆ.ಮುಡಾಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ…

Leave a Reply

Your email address will not be published. Required fields are marked *