ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ…ಪಕ್ಷ ಎಲ್ಲಿದೇರೀ…? ಸಿದ್ದರಾಮಯ್ಯ ವ್ಯಂಗ್ಯ…
- TV10 Kannada Exclusive
- August 28, 2023
- No Comment
- 91
ಮೈಸೂರು,ಆ28,Tv10 ಕನ್ನಡ
ರಾಜ್ಯದಲ್ಲಿ ಬಿಜೆಪಿ ಪಕ್ಷ ದಿವಾಳಿಯಾಗಿದೆ.ಪಕ್ಷ ಎಲ್ಲಿದೆ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವ್ಯಂಗ್ಯವಾಡಿದರು.ಘರ್ ವಾಪಸಿ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷಕ್ಕೆ ಯಾರೇ ಬಂದರು ಸ್ವಾಗತಿಸುತ್ತೇವೆ.
ನಮ್ಮ ಪಕ್ಷದಿಂದ ಹೋದವರು ಮಾತ್ರವಲ್ಲ.ನಮ್ಮ ಪಕ್ಷಕ್ಕೆ ಯಾರೇ ಬಂದರು ಸ್ವಾಗತ ಮಾಡುತ್ತೇವೆ.ಆದರೆ
ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು ಎಂದು ಕಂಡೀಷನ್ ಹಾಕಿದರು.
ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ,
ಇದುವರೆಗೂ ವಿಪಕ್ಷ ನಾಯಕನನ್ನೂ ಮಾಡಲು ಸಾಧ್ಯವಾಗಿಲ್ಲ.
ಸರ್ಕಾರ ಬಂದು ನೂರು ದಿನ ಆಗಿದೆ. ಬಿಜೆಪಿ ನಾಯಕರಿಗೆ ಭೇಟಿ ಮಾಡಲು ಬರಬೇಡಿ ಎಂದು ಮೋಧೀನೇ ಹೇಳಿದ್ದಾರೆ ಎಂದು
ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು…