ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದ ಸರ್ವೆಯರ್…ತುರ್ತು ಚಿಕಿತ್ಸೆ ಪಡೆಯುತ್ತಿದ್ದರೂ ಇಂತಹ ಸಾಹಸ ಯಾಕೆ…?
- CrimeMysore
- September 3, 2023
- No Comment
- 324
ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದ ಸರ್ವೆಯರ್…ತುರ್ತು ಚಿಕಿತ್ಸೆ ಪಡೆಯುತ್ತಿದ್ದರೂ ಇಂತಹ ಸಾಹಸ ಯಾಕೆ…?
ಮೈಸೂರು,ಸೆ3,Tv10 ಕನ್ನಡ
ಅಪೊಲೋ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಸರ್ವೆಯರ್ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದು ಅಚ್ಚರಿ ಮೂಡಿಸಿದ ಘಟನೆ ಮೈಸೂರು ಮಿನಿವಿಧಾನ ಸೌಧದ ಬಳಿ ಬೆಳಕಿಗೆ ಬಂದಿದೆ.ತುರ್ತು ಚಿಕಿತ್ಸೆಯಲ್ಲಿರುವ ಸಿಬ್ಬಂದಿಯ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ನಿರಾಕರಿಸಿ ಹಿಂದಕ್ಕೆ ಕಳಿಸಿದ ವಿಡಿಯೋ ವೈರಲ್ ಆಗಿದೆ.ಎಮರ್ಜೆನ್ಸ್ ಚಿಕಿತ್ಸೆಯಲ್ಲಿರುವ ಸಮಯದಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ದರ್ದು ಏನಿತ್ತು ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನ ಕಾಡಿದೆ.
ಆಂಬ್ಯುಲೆನ್ಸ್ ನಲ್ಲೇ ಮಲಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಬಂದವರು ಸರ್ವೆಯರ್ ದೇವರಾಜ್.ಮಂಡ್ಯ ತಾಲೂಕು ಕಚೇರಿಯಲ್ಲಿ ಸರ್ವೆಯರ್ ಆಗಿ ಕರ್ತವ್ಯ ನಿರತವಹಿಸುತ್ತಿದ್ದ ದೇವರಾಜ್ ಗೆ ಮೈಸೂರು ತಾಲೂಕು ಕಚೇರಿಗೆ ವರ್ಗಾವಣೆ ಆಗಿದೆ.ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಾಸಿಗೆ ಹಿಡಿದು ತುರ್ತು ಚಿಕಿತ್ಸೆ ಪಡೆಯುತ್ತಿದ್ದರೂ ಲೆಕ್ಕಿಸದೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮೈಸೂರು ತಾಲೂಕು ಕಚೇರಿಗೆ ಆಂಬ್ಯುಲೆನ್ಸ್ ನಲ್ಲೇ ಆಗಮಿಸಿದ್ದಾರೆ.
ದೇವರಾಜ್ ರವರು ಗುಣಮುಖರಾಗದೆ ಚಿಕಿತ್ಸೆ ಪಡೆಯುವ ವೇಳೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ಕಾರಣ ಏನು…?
ಗುಣಮುಖರಾಗುವ ಮುನ್ನವೇ ಡಿಸ್ಚಾರ್ಜ್ ಮಾಡದೆ ಆಸ್ಪತ್ರೆ ಅಧಿಕಾರಿಗಳು ಈ ಸಾಹಸಕ್ಕೆ ಅನುಮತಿ ನೀಡದ್ದು ಯಾಕೆ…?
ಅನಾರೋಗ್ಯದಲ್ಲಿರುವ ಸಿಬ್ಬಂದಿಯನ್ನ ರಿಲೀವ್ ಮಾಡಿದ ಕಾರಣಾದ್ರೂ ಏನು…?
ತುರ್ತು ಚಿಕಿತ್ಸೆ ಪಡೆಯುತ್ತಿದ್ದರೂ ಆಂಬ್ಯುಲೆನ್ಸ್ ನಲ್ಲಿ ಬಂದು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ದರ್ದು ಏನಿತ್ತು…?
ಈ ಎಲ್ಲಾ ಪ್ರಶ್ನೆಗಳೂ ಸಾರ್ವಜನಿಕರನ್ನ ಕಾಡುತ್ತಿದೆ.ಸರ್ಕಾರಿ ಉದ್ಯೋಗಿಗಳ ಸ್ಥಿತಿ ಎಲ್ಲಿಗೆ ಬಂತು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಸಧ್ಯ ಇಂತಹ ಸ್ಥಿತಿಯಲ್ಲಿ ಎ.ಡಿ.ಎಲ್.ಆರ್.ಚಿಕ್ಕಣ್ಣ ಹಾಗೂ ಸರ್ವೆ ಸೂಪರಿಡೆಂಟ್ ಸಿದ್ದಯ್ಯ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ.ಬಂದ ದಾರಿಗೆ ಸಕವಿಲ್ಲವೆಂಬಂತೆ ಸರ್ವೆಯರ್ ದೇವರಾಜ್ ಹಿಂದಿರುಗಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ…