ಶಿಕ್ಷಕರ ದಿನಾಚರಣೆ..ಶಾಸಕ ಜಿಟಿಡಿ ರಿಂದ ಕಾರ್ಯಕ್ರಮ ಉದ್ಘಾಟನೆ…ನಿವೃತ್ತ ಶಿಕ್ಷಕರಿಗೆ ಅಭಿನಂದನೆ…
- TV10 Kannada Exclusive
- September 5, 2023
- No Comment
- 164

ಶಿಕ್ಷಕರ ದಿನಾಚರಣೆ..ಶಾಸಕ ಜಿಟಿಡಿ ರಿಂದ ಕಾರ್ಯಕ್ರಮ ಉದ್ಘಾಟನೆ…ನಿವೃತ್ತ ಶಿಕ್ಷಕರಿಗೆ ಅಭಿನಂದನೆ…

ಮೈಸೂರು,ಸೆ5,Tv10 ಕನ್ನಡ
ಮೈಸೂರಿನ ಹೂಟಗಳ್ಳಿಯಲ್ಲಿರುವ ಸರಸ್ವತಿ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಆಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ರವರು ಕಾರ್ಯಕ್ರಮವನ್ನ ಉದ್ಘಾಟಿಸಿದರು.ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅತಿಥಿಗಳನ್ನ ಜಾನಪದ ಕಲಾತಂಡಗಳೊಂದಿಗೆ ಗೌರವಯುತವಾಗಿ ವೇದಿಕೆಗೆ ಕರತರಲಾಯಿತು.ಎಸ್ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಯನ್ನ ಸನ್ಮಾನಿಸಲಾಯಿತು.ನಿವೃತ್ತಗೊಂಡ 50 ಶಿಕ್ಷಕರಿಗೆ ಅಭಿನಂದಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗಿರೀಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು…