ಸಂವಿಧಾನದ ಮೌಲ್ಯಗಳು ಪ್ರಜಾಪ್ರಭುತ್ವದ ಜೀವಾಳ. ಇಂದಿನ ಯುವ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸುವಂತೆ ವಿದ್ಯಾರ್ಥಿಗಳಿಗೆ ಲಯನ್ ಸಿ.ಆರ್.ದಿನೇಶ್ ರವರು ಕರೆ ನೀಡಿದರು.
- TV10 Kannada Exclusive
- September 15, 2023
- No Comment
- 218
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ . ಇದಕ್ಕೆ ಸಾಕ್ಷಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇದೆಲ್ಲದಕ್ಕೆ ಕಾರಣ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು. ಅವರು ರಚಿಸಿದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಇಂದ ಪ್ರತಿಯೊಬ್ಬರು ಉನ್ನತ ಮಟ್ಟಕ್ಕೆ ಇರಲು ಸಾಧ್ಯ. ಹಾಗಾಗಿ ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ವ್ಯಕ್ತಿಯಾಗಿದ್ದಾರೆ.
ಸಮಾಜಶಾಸ್ತ್ರ ಉಪನ್ಯಾಸಕ ಡಾ. ಟಿ ಕೆ ರವಿ ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜಶಾಸ್ತ್ರ ಉಪನ್ಯಾಸಕರ ಹೆಚ್ ಕೆ. ಸೋಮೇಗೌಡ ರವರು ಸಂವಿಧಾನದ ಮಹತ್ವ ಮಾಹಿತಿ ನೀಡಿದರು. ವಿಶೇಷ ಉಪನಾಸ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕ ರಂಗಸ್ವಾಮಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾತುದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವತ್ಥ ನಾರಾಯಣಗೌಡ ,ಜುಡಿತ್ ಸಿಕವೈರಾ, ಲಿಂಗಣ್ಣ ಸ್ವಾಮಿ ಉಪಸಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರ ದಿನೇಶ್ ಎನ್ ಅವರು ಮಾಡಿದರು. ಕಾರ್ಯಕ್ರಮದಲ್ಲಿ 1,500 ವಿದ್ಯಾರ್ಥಿಗಳು ಮತ್ತು 50 ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದಿದ್ದು ವಿಶೇಷವಾಗಿತ್ತು.