ನಂಜನಗೂಡಿನ ವಿದ್ಯಾರ್ಥಿನಿ ಕೆ ವಿ ಧ್ಯಾನ ದೆಹಲಿಗೆ
- Uncategorized
- October 26, 2023
- No Comment
- 172

ದಿನಾಂಕ 27. 10 .2023 ರಿಂದ ಒಂದು 01.11 2023ರ ವರೆಗೆ ದೆಹಲಿಯಲ್ಲಿ ನಡೆಯುವ ಮೇರಿ ಮಟ್ಟಿದಾ ಮೇರಾ ದೇಶ ಅಮೃತ ಕಳಸ ಯಾತ್ರೆಗೆ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ.ವಿ ಧ್ಯಾನ ಆಯ್ಕೆಯಾಗಿದ್ದಾರೆ. ನಂಜನಗೂಡು ನಗರಸಭೆಯ ಮ್ಯಾನೇಜರ್ ಹೇಮಂತ್ ಕುಮಾರ್ ಮತ್ತು ಕಮ್ಯುನಿಟಿ ಆರ್ಗನೈಸರ್ ನಳಿನಿ ರವರು ಅಮೃತ ಕಳಸದ ಮಡಕೆ ನೀಡುವ ಮೂಲಕ ವಿದ್ಯಾರ್ಥಿನಿ ಕೆ.ವಿ. ಧ್ಯಾನ ರವರನ್ನು ಬೀಳ್ಕೊಟ್ಟರು. ಚಿತ್ರದಲ್ಲಿ ವಿದ್ಯಾರ್ಥಿನಿಯ ತಂದೆ ವಾಸುದೇವ ತಾಯಿ ಭಾಗ್ಯ ಇರುವರು. ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀರಾಮ್ ಪ್ರಸಾದ್ ಕಾಲೇಜಿನ ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳ್ಸಿದ್ದಾರೆ.