ಜಮೀನು ವಿಚಾರದಲ್ಲಿ ಸಂಭಂಧಿಕರ ನಡುವೆ ಮಾರಾಮಾರಿ…ಹಲವರಿಗೆ ಗಾಯ…
- TV10 Kannada Exclusive
- October 28, 2023
- No Comment
- 178

ಮೈಸೂರು,ಅ27,Tv10 ಕನ್ನಡ
ಜಮೀನು ಹಾಗೂ ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ಘಟನೆ ನಡೆದಿದೆ.ಘಟನೆಯಲ್ಲಿ
ಹಲವರು ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹಾಗೂ ಪುತ್ರ ಅಭಿಲಾಷ್ ವಿರುದ್ದ
ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದರ ಹಾಗೂ ಸಹೋದರರ ಮಕ್ಕಳ ಮೇಲೆ ಹಲ್ಲೆ ನಡೆದಿದೆ.
ಎಲ್ಲರಿಗೂ ಸಮವಾಗಿ ಪಾಲು ನೀಡಿದ ನಂತರವೂ
ತಮಗೆ ಮತ್ತಷ್ಟು ನಿವೇಶನ ಜಮೀನು ಬರಬೇಕು ಅಂತಾ ಗಲಾಟೆ ನಡೆದಿದೆ.
ಗಲಾಟೆಯಲ್ಲಿ ಅಂಬರೀಶ್ ಎಲ್ಲಮ್ಮ ನವೀನ್ ಕುಮಾರ್ ಸುಷ್ಮಾ ಜಗನ್ನಾಥ್ ಜಯಲಕ್ಷ್ಮಿ ಎಂಬುವರು ಗಾಯಗೊಂಡಿದ್ದಾರೆ.ಹಲ್ಲೆ ನಡೆಸಿದ ಆರೋಪಿಗಳು
ತಲೆ ಮರೆಸಿಕೊಂಡಿದ್ದಾರೆ…