ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

  • Crime
  • May 26, 2026
  • No Comment
  • 180

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ನಂಜನಗೂಡು,ಮೇ26,Tv10 ಕನ್ನಡ

ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ನಾಪತ್ತೆಯಾದ ಸ್ಥಳದಲ್ಲಿ ಮನುಷ್ಯರು ಸೃಷ್ಟಿಸಿದ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ.ಮಹಿಳೆ ಅಪಹರಣವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿರಬಹುದೇ ಎಂಬ ಆತಂಕ ಶುರುವಾಗಿದೆ.ಕುಟುಂಬಸ್ಥರು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾದ ಮಹಿಳೆ.ನಿನ್ನೆ ಜಮೀನಿಗೆ ಎಂದು ಮನೆ ಬಿಟ್ಟ ಶಿವರುದ್ರಮ್ಮ ಮತ್ತೆ ಹಿಂದಿರುಗಿಲ್ಲ.ತಡರಾತ್ರಿ ಆದ್ರೂ ಮನೆಗೆ ಹಿಂದಿರುಗದ ಹಿನ್ನಲೆ ಕುಟುಂಬಸ್ಥರು ಆತಂಕಗೊಂಡು ನಂಜನಗೂಡು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳ ಪರಿಶೀಲನೆ ನಡೆಸಿದಾಗ ಶಿವರುದ್ರಮ್ಮ ತೆರಳಿದ್ದ ಜಮೀನು ಬಳಿ ಮನುಷ್ಯರು ಬೆರಳಿನಿಂದ ಸೃಷ್ಟಿಸಿದ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ.ಅಲ್ಲದೆ ಶಿವರುದ್ರಮ್ಮ ರವರ ಚಪ್ಪಲಿಗಳು ಅನಾಥವಾಗಿ ಬಿದ್ದಿವೆ.ಕಾಡುಪ್ರಾಣಿಗಳು ಎಳೆದೊಯ್ದಿರಬಹುದೆಂಬ ಶಂಕೆಯಿಂದ ಅರಣ್ಯ ಇಲಾಖೆ ಸಹ ಶೋಧನೆ ನಡೆಸಿದ್ದಾರೆ.ಕೃತಕ ಚಿರತೆ ಹೆಜ್ಜೆ ಗುರುತು ಹೊರತುಪಡಿಸಿದರೆ ಎಳೆದೊಯ್ದಿರುವ ಇನ್ಯಾವುದೇ ಕುರುಹುಗಳು ಕಂಡು ಬಂದಿಲ್ಲ.ಶಿವರುದ್ರಮ್ಮ 60 ಗ್ರ ಚಿನ್ನದ ಸರ ಹಾಗೂ 10 ಗ್ರಾಂ ಕಿವಿ ಓಲೆಗಳು ಧರಿಸಿದ್ದರೆಂದು ಹೇಳಲಾಗಿದೆ.ಶಿವರುದ್ರಮ್ಮ ನಾಪತ್ತೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.ಕಿಡಿಗೇಡಿಗಳ ಕೃತ್ಯವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿದೆಯೋ ಗೊತ್ತಿಲ್ಲ.ಸಧ್ಯ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಶಿವರುದ್ರಮ್ಮ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ…

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *