ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ನಂಜನಗೂಡು,ಜೂ7,Tv10 ಕನ್ನಡ

ಸಾರ್ವಜನಿಕರಿಗೆ ಅನುಕೂಲವಾಗಿ ಪರಿಣಮಿಸಬೇಕಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸಿಬ್ಬಂದಿಗಳಿಲ್ಲದೆ ಬಣಗುಡುತ್ತಾ ಹಿಡಿಶಾಪಕ್ಕೆ ತುತ್ತಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನ ಖಾಲಿ ಖಾಲಿ ಕಚೇರಿ ನೋಡಿ ಬೇಸತ್ತು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ನಂಜನಗೂಡು ತಾಲೂಕು ಹಾಡ್ಯ ಗ್ರಾಮ ಪಂಚಾಯ್ತಿ ಕಾರ್ಯಾಲಯದ ದುಃಸ್ಥಿತಿ ಇದು.ಕಳೆದ ಹತ್ತಾರು ವರ್ಷಗಳಿಂದ ಈ ಗ್ರಾಮ ಪಂಚಾಯ್ತಿಗೆ ಬರುವ ಯಾವುದೇ ಸಿಬ್ಬಂದಿಯಾಗಲಿ ಅಧಿಕಾರಿಯಾಗಲಿ 6 ತಿಂಗಳ ಮೇಲೆ ಕರ್ತವ್ಯ ನಿರ್ವಹಿಸಲಿಲ್ಲ.ಇಲ್ಲಿಗೆ ನಿಯೋಜನೆಗೊಂಡ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಖಾಲಿಯಾಗುತ್ತಾರೆ.ಇರುವಷ್ಟು ದಿನ ಕಚೇರಿಯತ್ತ ಸುಳಿಯುವುದೂ ಇಲ್ಲ.ಇಲ್ಲಿಗೆ ಭೇಟಿ ನೀಡುವ ಮಂದಿಗೆ ಕಾಣಿಸುವುದು ಕೇವಲ ಅಟೆಂಡರ್ ಮಾತ್ರ.2012-13 ರ ಸಾಲಿನಲ್ಲಿ ಬೆಳಕಿಗೆ ಬಂದ ಹಗರಣವೊಂದು ಇಡೀ ಗ್ರಾಮ ಪಂಚಾಯ್ತಿ ಮೇಲೆ ಪರಿಣಾಮ ಬೀರಿದೆ.ಈ ಘಟನೆ ನಡೆದ ನಂತರ ಯಾವ ಅಧಿಕಾರಿ ಸಿಬ್ಬಂದಿಯಾಗಲಿ ಇಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿಲ್ಲ.ಹೀಗಾಗಿ ಸಾರ್ವಜನಿಕರು ಭೇಟಿ ನೀಡಿದ್ರೆ ಕಚೇರಿ ಖಾಲಿ ಖಾಲಿ ಕಾಣಿಸುತ್ತದೆ.ಸಿಬ್ಬಂದಿಗಳ ಅನುಪಸ್ಥಿತಿ ಇದ್ದರೂ ಅನುದಾನಗಳು ಮಾತ್ರ ಸಮರ್ಪಕವಾಗಿ ಬಳಕೆಯಾಗುತ್ತಿರುವುದು ಮಾತ್ರ ಸೋಜಿಗ.ಇನ್ನು ಈ ಕಟ್ಟಡವಂತೂ ಭೀತಿ ಹುಟ್ಟಿಸುತ್ತದೆ.ನೀರಿನ ವ್ಯವಸ್ಥೆ ಇಲ್ಲ.ಮಳೆ ಬಂದರಂತೂ ಎಡವಟ್ಟು ಜಾಸ್ತಿ.ಅಧಿಕಾರಿ ಸಿಬ್ಬಂದಿಗಳಿಗೆ ಈ ಕಚೇರಿ ಶಾಪಗ್ರಸ್ತವೆಂದೇ ಹೇಳಲಾಗುತ್ತಿದೆ.ಸಿಬ್ಬಂದಿಗಳ ವರ್ತನೆ ಸ್ಥಳೀಯರ ಸಂಯಮವನ್ನ ಕೆಣಕಿದೆ.ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡದಿದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *