ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ಮೈಸೂರು,ಮೇ27,Tv10 ಕನ್ನಡ

ವೃದ್ದೆ ಮನೆಯಲ್ಲಿ ನರ್ಸಿಂಗ್ ಸೇವೆಗೆ ಸೇರಿಕೊಂಡ ಐನಾತಿ ಒಬ್ಬಳು ಚಿನ್ನಾಭರಣ ಕಳುವು ಮಾಡಿ ಸಿಕ್ಕಿಬಿದ್ದ ಪ್ರಕರಣ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಎರಡು ಪ್ರಕರಣಗಳಿಂದ ಒಟ್ಟು22.10 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಚಾಮರಾಜನಗರ ಮೂಲದ ಮಹೇಶ್ವರಿ (27) ಸಿಕ್ಕಿಬಿದ್ದ ಆರೋಪಿ.

ವಿಜಯನಗರ ಒಂದನೇ ಹಂತದಲ್ಲಿರುವ ಮುತ್ತವ್ವ ಅಪ್ಪಣ್ಣ(82) ಎಂಬ ವೃದ್ದೆ ಮನೆಯಲ್ಲಿ ಏಜೆನ್ಸಿ ಒಂದರ ಮೂಲಕ ಮಹೇಶ್ವರಿ ನರ್ಸಿಂಗ್ ಸೇವೆ ಮಾಡಲು ನಿಯೋಜನೆಗೊಂಡಿದ್ದಾಳೆ.ಒಂದು ತಿಂಗಳ ಅವಧಿಯಲ್ಲಿ ಹಂತಹಂತವಾಗಿ 163 ಗ್ರಾಂ ಚಿನ್ನಾಭರಣ ಕಳುವು ಮಾಡಿದ್ದಾಳೆ.ಚಿನ್ನಾಭರಣಗಳಿ ಕಾಣಿಸದ ಹಿನ್ನಲೆ ಅನುಮಾನಗೊಂಡ ಮುತ್ತವ್ವ ಅಪ್ಪಣ್ಣ ರವರು ಮಹೇಶ್ವರಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೂಡಲೇ ಅಲರ್ಟ್ ಆದ ವಿಜಯನಗರ ಠಾಣೆ ಪೊಲೀಸರು ಮಹೇಶ್ವರಿಯನ್ನ ಚಾಮರಾಜನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳುವು ಮಾಡಿರುವುದಾಗಿ ತಿಳಿಸಿದ್ದಾಳೆ.ಮುತ್ತವ್ವ ಅಪ್ಪಣ್ಣ ಮನೆಯಲ್ಲಿ ಮಾತ್ರವಲ್ಲದೆ ಪಾಂಡವಪುರದ ಮನೆಯೊಂದರಲ್ಲೂ ಈ ಹಿಂದೆ ಇಂತಹ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 22.10 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಅಪರಾಧ ಮತ್ತು ಸಂಚಾರಿ ಡಿಸಿಪಿ ರವರಾದ ಸುಂದರರಾಜ್ ಹಾಗೂ ವಿಜಯನಗರ ಎಸಿಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ವಿಜಯನಗರ ಇನ್ಸ್ಪೆಕ್ಟರ್ ಎಂ.ಆರ್.ಲವ ಹಾಗೂ ಉಪನಿರೀಕ್ಷಕರಾದ ಆನಂದ್,ಜೈಕೀರ್ತಿ,ಕೃಷ್ಣ,ವನಜಾಕ್ಷಿ ನೇತೃತ್ವದಲ್ಲಿ ಮುಖ್ಯಪೇದೆಗಳಾದ ಶಂಕರ್,ಪ್ರದೀಪ್ ಕುಮಾರ್,ಪ್ರಭಾಕರ್ ಹಾಗೂ ಪೇದೆಗಳಾದ ವೆಂಕಟೇಶ್,ನಿಂಗರಾಜೇಗೌಡ,ಮಂಜುನಾಥ್ ಮಹಿಳಾ ಪೇದೆ ರಂಜಿತಾ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರಶಂಸಿಸಿದ್ದಾರೆ…

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *