ಕರ್ನಾಟಕ ಹೆಸರಿಗೆ 50 ವರ್ಷ…ನವೆಂಬರ್ 1 ರಂದು ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಮನವಿ…
- TV10 Kannada Exclusive
- October 28, 2023
- No Comment
- 298

ಮೈಸೂರು,ಅ28,Tv10 ಕನ್ನಡ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ಪೂರ್ಣಗೊಂಡ ಹಿನ್ನಲೆ ನವೆಂಬರ್ 1 ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ವಿಶೇಷವಾಗಿ ಆಚರಿಸಲು ಸರ್ಕಾರ ಉದ್ದೇಶಿಸಿದೆ.ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು ಕೆಲವು ತೀರ್ಮಾನಗಳನ್ನ ಕೈಗೊಳ್ಳಲಾಗಿದ್ದು ಸ್ವರೂಪಗಳನ್ನ ಸಿದ್ದಪಡಿಸಲಾಗಿದೆ.
1.ನವೆಂಬರ್ 1 ರಂದು ರಾಜ್ಯದ ಎಲ್ಲಾ ಮನೆಗಳ ಮುಂದೆ ಕೆಂಪು ಹಳದಿ ಬಣ್ಣದ ರಂಗೋಲಿ ಹಾಕಿ ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ..ಉಸಿರಾಗಲಿ ಕನ್ನಡ ಎಂಬ ಘೋಷಣಾ ವಾಕ್ಯ ಬರೆಯುವಂತೆ ನಾಗರೀಕರಿಗೆ ಮನವಿ ಮಾಡುವುದು.
2.ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ನಾಡಗೀತೆ ಪ್ರಸಾರ ಮಾಡುವುದು.ರಾಷ್ಟ್ರಗೀತೆಗೆ ಎದ್ದುನಿಂತು ಗೌರವ ಸಲ್ಲಿಸುವಂತೆ ನಾಡಗೀತೆಗೂ ಎದ್ದು ನಿಂತು ಗೌರವ ಸಲ್ಲಿಸಲು ಮನವಿ ಮಾಡುವುದು.
3.ನವೆಂಬರ್ 1 ರಂದು ರಾಜ್ಯದ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಸಂಜೆ 5 ಗಂಟೆಗೆ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನ ಆಕಾಶದೆತ್ತರಕ್ಕೆ ಹಾರಿ ಬಿಟ್ಟು ಸುವರ್ಣ ಸಂಭ್ರಮ ಆಚರಿಸುವಂತೆ ಮನವಿ ಮಾಡುವುದು.
4.ನವೆಂಬರ್ 1 ರಂದು ಸಂಜೆ 7 ಗಂಟೆಗೆ ಎಲ್ಲಾ ಮನೆ,ಕಚೇರಿಗಳ ಮುಂದೆ ದೀಪ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಜಿಲ್ಲಾಡಳಿತ ನಾಗರೀಕರ ಹಾಗೂ ಸಂಘಸಂಸ್ಥೆಗಳ ನೆರವಿನಿಂದ ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್.ಎಸ್.ತಂಗಡಗಿ ರವರು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ…