ಹಳ್ಳಕ್ಕೆ ಉರುಳಿದ ಗೂಡ್ಸ್ ವ್ಯಾನ್…ಓರ್ವ ಸಾವು…10 ಮಂದಿಗೆ ಗಾಯ…
- CrimeMysore
- November 12, 2023
- No Comment
- 403

ಹಳ್ಳಕ್ಕೆ ಉರುಳಿದ ಗೂಡ್ಸ್ ವ್ಯಾನ್…ಓರ್ವ ಸಾವು…10 ಮಂದಿಗೆ ಗಾಯ…
ಮೈಸೂರು,ನ12,Tv10 ಕನ್ನಡ
ಚಾಲಕನ ನಿಯಂತ್ರಣ ತಪ್ಪಿ ಅಶೋಕಾ ಲೈಲ್ಯಾಂಡ್ ಗೂಡ್ಸ್ ವಾಹನ ಸೇತುವೆಯ ಹಳ್ಳಕ್ಕೆ ಬಿದ್ದ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಮೇಗಳಾಪುರ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ.ಎಲ್ಲರೂ ಬಂಡೀಪಾಳ್ಯ ಗ್ರಾಮದ ನಿವಾಸಿಗಳು.ಬಂಡೀಪಾಳ್ಯದಿಂದ ಟಿ.ನರಸೀಪುರಕ್ಕೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ.ರವಿಚಂದ್ರ,ಸುನಿಲ್,ದರ್ಶನ್,ನಿತಿನ್,ಪವನ್,ದರ್ಶನ್, ನಿತಿನ್,ಶಶಾಂಕ್,ವಿಜಯ್,ವಿಕಾಶ್,ಸುದೀಪ್ ಗಾಯಗೊಂಡವರು.
ಗಾಯಾಳುಗಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಗಾಯಗೊಂಡವರ ಪೈಕಿ ದರ್ಶನ್(23) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಟಿ.ನರಸೀಪುರದಲ್ಲಿ ಬಾಳೆಕಾಯಿ ಲೋಡ್ ಮಾಡಲು ತೆರಳುತ್ತಿದ್ದರೆಂದು ಹೇಳಲಾಗಿದೆ.ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗಿದೆ.ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್,ಅಡಿಷನಲ್ ಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವರುಣ ಠಾಣೆಯ ಪಿಎಸ್ಸೈ ಚೇತನ್ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ…