ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್…ದುರಹಂಕಾರ ವರ್ತನೆ ಖಂಡಿಸಿ ಪ್ರತಿಭಟನೆ…
- TV10 Kannada Exclusive
- November 21, 2023
- No Comment
- 276

ಚೆನ್ನಪಟ್ಟಣ,ನ21,Tv10 ಕನ್ನಡ
ಸುಮಾರು ಒಂದೂವರೆ ತಿಂಗಳ ಕಾಲ 11 ಮ್ಯಾಚ್ ಗಳನ್ನ ಆಡಿ.ತೀವ್ರ ಹೋರಾಟ ನಡೆಸಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನ ಮಣಿಸಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಮಾರ್ಷ್ ದುರಹಂಕಾರವನ್ನ ಚೆನ್ನಪಟ್ಟಣದ ಜನತೆ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷರ ರಮೇಶ್ ಗೌಡರ ನೇತೃತ್ವದಲ್ಲಿ ಚೆನ್ನಪಟ್ಟಣದ ಕಾವೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಟ್ರೋಫಿ ಮೇಲೆ ಕಾಲಿಟ್ಟ ಫೋಟೋ ಪ್ರದರ್ಶಿಸಿ ಮಾರ್ಷ್ ಮುಖಕ್ಕೆ ಕಪ್ಪುಮಸಿ ಬಳಿದು ಪ್ರತಿಭಟನೆ ನಡೆಸಿದ್ದಾರೆ.ಮಾರ್ಷ್ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಟಗಾರನ ದುರಹಂಕಾರದ ವರ್ತನೆಯನ್ನ ಖಂಡಿಸಿದ್ದಾರೆ.ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ
ಬೇವೂರು ಯೋಗೇಶ್ ಗೌಡ ಸೇರಿದಂತೆ ಹಲವು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿದ್ದಾರೆ…