ನೈತಿಕ ಶಿಕ್ಷಣ ಇಂದಿನ ಯುವಜನರಿಗೆ ತೀರಾ ಅಗತ್ಯವಿದೆ -ರಾಮ್ ಪ್ರಸಾದ್
- TV10 Kannada Exclusive
- November 23, 2023
- No Comment
- 256
ಇಂದಿನ ಮುಂದುವರೆದ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣದ ಮಹತ್ವ ಕಡಿಮೆಯಾಗುತ್ತಿದೆ. ಹಾಗಾಗಿ ರಾಮಕೃಷ್ಣ ಆಶ್ರಮದ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಜ್ಞಾನವಿಕಾಸಕ್ಕೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ನಂಜನಗೂಡಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀರಾಮ್ ಪ್ರಸಾದ್ ರವರು ಅಭಿಪ್ರಾಯ ಪಟ್ಟರು .
ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ಅವರು ರಾಮಕೃಷ್ಣ ಆಶ್ರಯದ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿವೇಕಾನಂದರ ಛಾಯಾಚಿತ್ರದ ಫಲಕವನ್ನು ಸ್ವೀಕರಿಸಿ ವಿದ್ಯಾರ್ಥಿಗಳಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ಪರೀಕ್ಷೆಗಳು ತೀರಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಇಂತಹ ಸಂಘಟನೆಗಳ ಜೊತೆಗೆ ಕೈಜೋಡಿಸಿದರೆ ಶಾಲಾ ಕಾಲೇಜುಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿಮಿಸಲು ಸಾಧ್ಯ ಎಂದು ಹೇಳಿದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಂಜನಗೂಡಿನ ತಾಲೂಕಿನ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದ್ದು ತಾಲೂಕಿನ 14 ಶಾಲೆಗಳಿಂದ ಇಂದು 270 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ 9ನೇ ತರಗತಿಯಲ್ಲಿ ೧.ಸೃಜನ್ ಕಾಮಣ್ಣನವರ್ ೨.ಗೌತಮಿ ಎಂ ಸಿ ೩.ಸೃಜನ್ ಎಚ್ ಬಿ ಎಲ್ಲರೂ ಸರ್ಕಾರಿ ಆದರ್ಶ ವಿದ್ಯಾಲಯ ದೇಬೂರು ಮೊದಲ ಮೂರು ಬಹುಮಾನಗಳನ್ನು ಪಡೆದರು.10ನೇ ತರಗತಿಯ ವಿಭಾಗದಲ್ಲಿ ೧.ಸುಶ್ರುತ ಕಶ್ಯಪ್.ಜೆ ಸಿಟಿಜನ್ ಪ್ರೌಢಶಾಲೆ ೨. ಬಾಂಧವ್ಯ ಹೆಚ್ಎಮ್ ಸರ್ಕಾರಿ ಆದರ್ಶ ವಿದ್ಯಾಲಯ ೩.ಈಶ್ವರ ಸಿಂಗ್ ಶ್ರೀ ನೀಲಕಂಠ ಪ್ರೌಢಶಾಲೆ ಮೊದಲ ಮೂರು ಬಹುಮಾನಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅಶ್ವಥನಾರಾಯಣಗೌಡ, ಉಪ ಪ್ರಾಂಶುಪಾಲರಾದ ಬಾಲ ಸರಸ್ವತಿ ಪರೀಕ್ಷೆಯ ಆಯೋಜಕರಾದ ಆನಂದ್ ರಾಜ್ , ಬಾಬು ಲಾಲ್ ಬಿ ,ಶ್ರೀನಿಧಿ ಇದ್ದರು.