ಅಪರಾಧ ತಡೆ ಮಾಸಾಚರಣೆ…ಬೈಕ್ ರಾಲಿ ಮೂಲಕ ಪೊಲೀಸರಿಂದ ಜಾಗೃತಿ…
- TV10 Kannada Exclusive
- December 10, 2023
- No Comment
- 218

ಹುಣಸೂರು,ಡಿ10,Tv10 ಕನ್ನಡ


ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಬಿಳಿಕರೆ ಪೊಲೀಸರು ಬೈಕ್ ರಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು, ತಮ್ಮ ಆಭರಣಗಳ ಬಗ್ಗೆ ನಿಗಾವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ ನಿಯಮಗಳ ಬಗ್ಗೆ, ಗಮನವನ್ನು ಬೇರೆಡೆ ಸೆಳೆದು ಹಣ ಲಪಟಾಯಿಸುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಿದರು. ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಹಾಗೂ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಬಿಳಿಕೆರೆ ಎಸ್ಸೈ ಲೋಲಾಕ್ಷಿ ನೇತೃತ್ವದಲ್ಲಿ ಬೈಕ್ ರಾಲಿ ನೆರವೇರಿತು.ಬಿಳಿಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು…