ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ-ಪೊಲೀಸ್ ಇನಸ್ಪೆಕ್ಟರ್ ಪ್ರಕಾಶ್
- TV10 Kannada Exclusive
- December 20, 2023
- No Comment
- 171

ಮಾದಕ ವಸ್ತುಗಳು ಯುವ ಪೀಳಿಗೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಅನೇಕರು ಅಪಾಯಕ್ಕೆ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನಂಜನಗೂಡಿನ ಪೊಲೀಸ್ ಇನಸ್ಪೇಕ್ಟರ್ ಶ್ರೀ ಪ್ರಕಾಶ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಮಾದಕ ವಸ್ತುಗಳ ಸೇವನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಪಿಡುಗುವಿನಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ.ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ರವರು ಮಾತನಾಡಿ ಮಾದಕ ವಸ್ತುಗಳ ಸೇವನೆ ಪ್ರಪಂಚದಲ್ಲಿ ಎಲ್ಲಾ ಕಡೆ ಕಂಡುಬರುವ ಒಂದು ದೊಡ್ಡ ಪಿಡುಗು. ಗಂಡು ಹೆಣ್ಣು ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ತಂಬಾಕು, ಗಾಂಜಾ, ಕೊಕೇನ್, ಅನಿಲಗಳು, ನಿದ್ರೆ ಮಾತ್ರೆ,ಅಫೀಮು ಇತ್ಯಾದಿಗಳ ಸೇವನೆಯಿಂದ ಯುವಕರು ಇವುಗಳಿಗೆ ದಾಸರಾಗಿ ಹಾಗೂ ಬಿಡಲಾಗದ ಪರಿಸ್ಥಿತಿಗೆ ಒಳಪಟ್ಟಿದ್ದಾರೆ .ಹಾಗಾಗಿ ಇಂದು ಯುವ ಪೀಳಿಗೆಯಲ್ಲಿ ಇವುಗಳ ಉಪಯೋಗ ಬಗ್ಗೆ ಜಾಗೃತಿ ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಮುಂದೆ ಮಾದಕ ದ್ರವ್ಯ ಮುಕ್ತ ಸುಂದರ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ ಡಾ. ಟಿ.ಕೆ ರವಿ ,ಮೀನಾ, ನಾಗವೇಣಿ, ಮೋಹನ್ ಕುಮಾರ್ ,ನಾಗರಾಜು, ಬಿಂದು ,ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು