ರಾಷ್ಟ್ರೀಯ ಗ್ರಾಹಕರ ದಿನಾಚರಣೆ…ಗ್ರಾಹಕನೇ ರಾಜ ಪುಸ್ತಕ ಬಿಡುಗಡೆ…
- TV10 Kannada Exclusive
- December 25, 2023
- No Comment
- 163
ಮೈಸೂರು,ಡಿ25,Tv10 ಕನ್ನಡ
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಗ್ರಾಹಕರಲ್ಲಿ ಅರಿವು ಮೂಡಿಸುವಂತಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಜೆಪಿ ನಗರದಲ್ಲಿರುವ ಪಂಡಿತ್ ಗವಾಯಿ ಸ್ಟೇಡಿಯಂ ಆವರಣದಲ್ಲಿ
ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸುವರ್ಣ ಮಹೋತ್ಸವ ಅಂಗವಾಗಿ ಗ್ರಾಹಕನೇ ರಾಜ ಪುಸ್ತಕವನ್ನು ಹೊರತರಲಾಗಿದ್ದು, ನಿವೃತ್ತ ಡಿ ವೈ ಎಸ್ ಪಿ ರಂಗಸ್ವಾಮಿ ಅವರು ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ರಂಗಸ್ವಾಮಿ ಗ್ರಾಹಕರ ಹಕ್ಕುಗಳು ಏನು, ಅವುಗಳನ್ನು ಏಕೆ ನಾವು ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಮೊದಲು ಅರಿವು ಮೂಡಬೇಕು ಎಂದು ಹೇಳಿದರು.ಹೇಗೆ ನಮಗೆ ಮೋಸ ಆಗುತ್ತಿದೆ ಅಂಗಡಿಗಳಲ್ಲಿ ಎಂ ಆರ್ ಪಿ ಹಾಕಿರುತ್ತಾರೆ ಆದರೆ ಅದರಲ್ಲಿ ಎಲ್ಲ ಟ್ಯಾಕ್ಸ್ ಸೇರಿದ್ದರು ಮತ್ತೆ ಇನ್ನೇನು ಸೇರಿಸಿ ಹೆಚ್ಚಿನ ಬೆಲೆ ಪಡೆಯುತ್ತಾರೆ ಇಂತಹ ವಿಚಾರಗಳ ಬಗ್ಗೆ ಎಚ್ಚರದಿಂದ ಇರುವಂತರ ಸಲಹೆ ನೀಡಿದರು.ಎಲ್ಲೇ ಆಗಲಿ, ಯಾರೇ ಆಗಲಿ ಮೋಸ ಆಗುತ್ತಿರುವುದು ಕಂಡಾಗ ಪ್ರಶ್ನೆಸಬೇಕು, ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು, ಸಾರ್ವಜನಿಕರಲ್ಲಿ ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಯುವ ಜನತೆಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಹಿರಿಯ ವಕೀಲರಾದ ರವೀಂದ್ರ,ಪ್ರಾಂತ ಕಾರ್ಯಕಾರಣಿಯ ಸದಸ್ಯರಾದ ಡಾ. ಜಿ. ವಿ ರವಿಶಂಕರ್, ಜೆಪಿ ನಗರದ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉಪಾಧ್ಯಕ್ಷ ಜಯಕುಮಾರ್, ದೊರೆಸ್ವಾಮಿ, ಮಹಿಳಾ ಪ್ರಮುಖ್ ನಾಗಮಣಿ, ದರ್ಶನ್ ಮೂರ್ತಿ ಮತ್ತಿರರು ಪಾಲ್ಗೊಂಡಿದ್ದರು…