ಮಹಿಷ ಚಿತ್ರ ಇರುವ ರಂಗೋಲಿ ತುಳಿದು ವಿಕೃತ ಮೆರೆದ ಆರೋಪ…6 ಮಂದಿ ವಿರುದ್ದ FIR ದಾಖಲು…
- Crime
- December 27, 2023
- No Comment
- 454


ನಂಜನಗೂಡು,ಡಿ27,Tv10 ಕನ್ನಡ
ನಿನ್ನೆ ನಂಜನಗೂಡಿನಲ್ಲಿ ನಡೆದ ಅಂಧಕಾಸುರನ ಸಂಹಾರ ಕಾರ್ಯಕ್ರಮದಲ್ಲಿ ಶೋಷಿತ ವರ್ಗದ ಮಹಾಪುರುಷ ಮಹಿಷ ಚಕ್ರವರ್ತಿಯ ಚಿತ್ರವಿರುವ ರಂಗೋಲಿ ತುಳಿದು ವಿಕೃತಿ ಮೆರೆಯುವ ಮೂಲಕ ಮೌಢ್ಯಾಚರಣೆ ಆಚರಿಸಿದ್ದಾರೆಂದು ಆರೋಪಿಸಿ ಟೌನ್ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.ಮೌಢ್ಯಪ್ರತಿಭಂಧಕ ಕಾಯ್ದೆ ಜಾರಿ ಇದ್ದರೂ ಅದನ್ನು ಲೆಕ್ಕಿಸದೆ ಮಹಿಷ ಚಿತ್ರವಿರುವ ರಂಗೋಲಿಯನ್ನ ತುಳಿದು ವಿಕೃತ ಮೆರೆದಿದ್ದಾರೆಂದು ಮಾಲೇಶ್ ಎಂಬುವರು ಕಪಿಲೇಶ್,ಅನಂತ್,ಕಿರಣ್,ರಾಜು,ರವಿ,ಗಿರೀಶ್ ಹಾಗೂ ಇತರರ ಮೇಲೆ FIR ದಾಖಲಿಸಿದ್ದಾರೆ.
ಶ್ರೀಕಂಠೇಶ್ವರನ ದೇವಾಲಯದ ಬಳಿ ನಿನ್ನೆ ಅಂಧಕಾಸುರನ ಸಂಹಾರ ಕಾರ್ಯಕ್ರಮ ಇತ್ತು.ಇಲ್ಲಿ ಮಹಿಷನ ಚಿತ್ರದ ಫ್ಲೆಕ್ಸ್ ಅಳವಡಿಸಿ ರಂಗೋಲಿ ಬಿಡಿಸಿ ಸಂಹಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಇದನ್ನ ಮಾಲೇಶ್,ನಾರಾಯಣ್ ಹಾಗೂ ಇತರರು ವಿರೋಧಿಸಿದ್ದರು.ಈ ವೇಳೆ ದೇವಾಲಯದ ಇಓ ಜಗದೀಶ್ ಕುಮಾರ್ ರವರು ಮೌಢ್ಯಾಚರಣೆ ಆಚರಿಸುವುದಿಲ್ಲವೆಂದು ನಂಬಿಸಿ ನಂತರ ಮಹಿಷನ ಚಿತ್ರವಿರುವ ರಂಗೋಲಿಯನ್ನ ಕೆಲವು ಆಗಮಿಕರು ಹಾಗೂ ಪುರೋಹಿತರು ತುಳಿದು ವಿಕೃತಿ ಮೆರೆದಿರುವುದಲ್ಲದೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.ಮಹಿಷ ಚಿತ್ರವನ್ನ ತುಳಿಯುವ ವೇಳೆ ವಿರೋಧಿಸಿದಾಗ ನಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ…