ಕುರಿಗಳ ಹಿಂಡಿನ ಮೇಲೆ ಹರಿದ ಹತ್ತು ಚಕ್ರದ ಲಾರಿ…18 ಕುರಿಗಳು ಸಾವು…40 ಕ್ಕೆ ಗಾಯ…
- Crime
- December 28, 2023
- No Comment
- 118
ನಂಜನಗೂಡು,ಡಿ28,Tv10 ಕನ್ನಡ
ಡಸ್ಟ್ ತುಂಬಿದ 10 ಚಕ್ರದ ಲಾರಿ ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 18 ಕುರಿಗಳ ಸಾವನ್ನಪ್ಪಿದ್ದು 40 ಕುರಿಗಳು ಗಂಭೀರ ಗಾಯಗೊಂಡ ಘಟನೆ ನಂಜನಗೂಡಿನ ಇಂದಿರಾನಗರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.ಬೇಗೂರು ಸರಗೂರು ಮುಖ್ಯರಸ್ತೆಯ ಹೆಡಿಯಾಲ ಸಮೀಪದ ಇಂದಿರಾ ನಗರ ಗ್ರಾಮ.ಘಟನೆಯಲ್ಲಿ ಕುರಗಾಹಿಗೂ ಗಾಯವಾಗಿದೆ.
ಸ್ಥಳಕ್ಕೆ ಹುಲ್ಲಹಳ್ಳಿ ಪಿಎಸ್ಐ ರಮೇಶ್ ಕರ್ಕಿಕಟ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು 8 ಲಕ್ಷ ನಷ್ಟವಾಗಿದೆ ಎಂದು ಹೇಳಲಾಗಿದೆ. ಮುಂಜಾನೆ 5 ಗಂಟೆ ವೇಳೆಯಲ್ಲಿ ಡಸ್ಟ್ ತುಂಬಿರುವ ಟಿಪ್ಪರ್ ಲಾರಿ
ತುಮಕೂರು ಜಿಲ್ಲೆ
ಬೇಗೂರು ಕಡೆಯಿಂದ ವೇಗವಾಗಿ ಬಂದು ಕುರಿಗಳ ಮೇಲೆ ಹರಿಸಿದ್ದಾನೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ…