ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಕನ್ನ ಪ್ರಕರಣ…ಸಮಿತಿ ರಚನೆ…ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ…
- TV10 Kannada Exclusive
- December 29, 2023
- No Comment
- 445


ಮೈಸೂರು,ಡಿ29,Tv10 ಕನ್ನಡ

ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯಕ್ಕೇ ಸೇರಿದ ಜಮೀನುಗಳನ್ನ ಲಪಟಾಯಿಸಿದ ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಪ್ರಕರಣಕ್ಕೆ ಚುರುಕು ನೀಡಲಾಗಿದೆ.ಅಕ್ರಮದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಿ ಸೂಚನೆ ನೀಡಲಾಗಿದೆ.ಅಕ್ರಮ ನಡೆದ ಸ್ಥಳಕ್ಕೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೈಸೂರುತಾಲೂಕು ಕಸಬ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 396 ರ 3 ಎಕ್ರೆ 07 ಗುಂಟೆ,ಸರ್ವೆ ನಂ 397 ರ 0.05 ಗುಂಟೆ,ಸರ್ವೆ ನಂ.398 ರ 1 ಎಕ್ರೆ 18 ಗುಂಟೆ ಹಾಗೂ ಸರ್ವೆ ನಂ.399 ರ 4 ಎಕ್ರೆ 18 ಗುಂಟೆ ಜಮೀನುಗಳು ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಸೇರಿದ ಆಸ್ತಿ.ಮೈಸೂರು ಮಹರಾಜರು ದೇವಾಲಯಕ್ಕಾಗಿ ನೀಡಿದ ಜಮೀನುಗಳು ಇವು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು,ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಸದರಿ ಜಮೀನುಗಳ ಪಹಣಿಯಲ್ಲಿ ಸರ್ಕಾರಿ ಎಂದು ನಮೂದಿಸಿ ಖಾಸಗಿ ವ್ಯಕ್ತಿಗಳಿಗೆ ಕೋಟ್ಯಾಂತರ ರೂಗಳಿಗೆ ಮಾರಾಟ,ಒಪ್ಪಂದ ಮಾಡಿ ಅಕ್ರಮವೆಸಗಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ.ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು,ನೌಕರರು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಂಡು ದೇವಾಲಯದ ಆಸ್ತಿ ರಕ್ಷಣೆ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರಿಗೆ ಪತ್ರ ಬರೆದು ಮನವಿ ಮಾಡಿದ್ದರು.ಈ ಹಿನ್ನಲೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ಸಮಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…