ತುಂಡು ಭೂಮಿ ಹಂಚಿಕೆ,ಭೂ ಪರಿಹಾರವಾಗಿ ಜಾಗ ನೀಡುವ ನಿರ್ದೇಶನಗಳ ಉಲ್ಲಂಘನೆ ಪ್ರಕರಣಗಳ ಕಡತ ಸಲ್ಲಿಸಿ…ಮುಡಾ ಆಯುಕ್ತರಿಗೆ ತನಿಖಾ ಸಮಿತಿ ಅಧ್ಯಕ್ಷರಿಂದ ಖಡಕ್ ಪತ್ರ…
- TV10 Kannada Exclusive
- January 3, 2024
- No Comment
- 281
ಮೈಸೂರು,ಜ4,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ತುಂಡು ಭೂಮಿ ಹಂಚಿಕೆ,,ಭೂ ಪರಿಹಾರವಾಗಿ ಜಾಗ ನೀಡುವ ಕುರಿತು 14-03-2023 ರ ನಿರ್ದೇಶನಗಳನ್ನ ಉಲ್ಲಂಘನೆಯಾಗಿರುವ ಪ್ರಕರಣಗಳನ್ನ ತನಿಖೆ ನಡೆಸಲು ಸಮಿತಿ ರಚನೆಯಾಗಿದೆ.14-03-2023 ರಿಂದ ಇಲ್ಲಿಯವರೆಗೆ ಭೂ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ,ತುಂಡು ಭೂಮಿ ಹಂಚಿಕೆ ವಿಷಯಕ್ಕೆ ಸಂಭಂಧಿಸಿದಂತೆ ಕ್ರಮ ವಹಿಸಿರುವ ಎಲ್ಲಾ ಪ್ರಕರಣಗಳ ಪ್ರಕರಣಾವಾರು ಮೂಲ ಕಡತಗಳನ್ನ ಸಲ್ಲಿಸುವಂತೆ ಮುಡಾ ಆಯುಕ್ತರಿಗೆ ಸೂಚಿಸಲಾಗಿತ್ತು.ಕಡತಗಳ ಪ್ರಮಾಣ ಹೆಚ್ಚಾದ ಕಾರಣ ಸಮಯದ ಕಾಲಾವಕಾಶ ಕೋರಿದ್ದರು.ಕಾಲಾವಕಾಶ ಪೂರ್ಣಗೊಂಡರೂ ಇದುವರೆಗೆ ಕಡತಗಳನ್ನ ಸಲ್ಲಿಸದ ಹಿನ್ನಲೆ ತನಿಖಾ ಸಮಿತಿಯ ಅಧ್ಯಕ್ಷರು ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಮುಡಾ ಆಯುಕ್ತರಿಗೆ ಪತ್ರ ಬರೆದು 2 ದಿನಗಳ ಒಳಗೆ ಮೂಲ ಕಡತ,ಘನ ನ್ಯಾಯಾಲಯದ ಆದೇಶ,ಸರ್ಕಾರ ನಿಗದಿಪಡಿಸಿರುವ ನಿಯಮ ಹಾಗೂ ಕಾಯ್ದೆಗಳನ್ನೊಳಗೊಂಡ ಮಾಹಿತಿಯನ್ನ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.ಇಲ್ಲದಿದ್ದಲ್ಲಿ ವರದಿ ಸಲ್ಲಿಕೆಯಾಗಿಲ್ಲವೆಂಬ ಕಾರಣ ನೀಡಿ ಸರ್ಕಾರದ ಗಮನಕ್ಕೆ ತರುವುದಾಗಿ ಎಚ್ಚರಿಸಿದ್ದಾರೆ…