ವರುಣಾ ನಾಲೆಗೆ ಸೇರಿದ ಜಾಗವನ್ನೇ ಮಾರಾಟ ಮಾಡಿದ ಭೂಪ…ಭೂಗಳ್ಳನ ವಿರುದ್ದ ಎಫ್.ಐ.ಆರ್.ದಾಖಲು…
- Crime
- January 7, 2024
- No Comment
- 436

ಮಂಡ್ಯ,ಜ8,Tv10 ಕನ್ನಡ


ವರುಣ ನಾಲೆಗೆ ಸೇರಿದ ಜಾಗವನ್ನ ಜಾಗವನ್ನು ಅಕ್ರಮಿಸಿಕೊಂಡು ಮಾರಾಟ ಮಾಡಿದ ಭೂಗಳ್ಳನ ವಿರುದ್ದ ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್.ದಾಖಲಾಗಿದೆ.
ವೀರಭದ್ರಯ್ಯ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿಯ ಬೆಳಗೊಳ ಗ್ರಾಮದ ಸರ್ವೆ ನಂ44 ರ 2 ಎಕರೆ 13 ಗುಂಟೆ ಜಮೀನಿನಲ್ಲಿ 14 ಗುಂಟೆ ಜಮೀನನ್ನ ಕಾವೇರಿ ನೀರಾವರಿ ನಿಗಮವು 1990ರಲ್ಲಿ ಪರಿಹಾರ ನೀಡಿ ಭೂ ಸ್ವಾದೀನ ಪಡಿಸಿ ಕೊಂಡು ವರುಣ ನಾಲೆ ನಿರ್ಮಾಣವಾಗಿದೆ. ಈ ಮಾಹಿತಿಯನ್ನ ಮರೆ ಮಾಚಿದ ಭೂಮಾಲಿಕ ವೀರಭದ್ರಯ್ಯ ಕಂದಾಯ ಅಧಿಕಾರಿಗಳ ಜೊತೆ ಶಾಮೀಲಾಗಿ ಭೂ ಸ್ವಾದೀನವಾಗಿದ್ದ ಜಮೀನನ್ನು ಸೇರಿಸಿ ಅನ್ಯ ಕ್ರಾಂತ ಮಾಡಿಸಿಕೊಂಡು ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದಾನೆ.ಈ ಸಂಭಂಧ ಮೈಸೂರು ಮೂಲದ ವಕೀಲರಾದ ಮಹೇಶ್ ಎಸ್ ರವರು ದಾಖಲೆ ಸಮೇತ ನೀಡಿದ ದೂರನ್ನ ಜಿಲ್ಲಾಧಿಕಾರಿ ಗಳು ಪರಿಶೀಲಿಸಿದ ನಂತರ ಅಕ್ರಮ ಎಂದು ಸಾಬೀತಾದ ಹಿನ್ನಲೆ ವೀರಭದ್ರನ ವಿರುದ್ದ ಕೆ.ಆರ್ ಎಸ್ ಪೋಲಿಸ್ ಠಾಣೆ ಯಲ್ಲಿ ತಹಸೀಲ್ದಾರ್ ಆದೇಶದ ಮೇರೆಗೆ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಕಂದಾಯ ಅಧಿಕಾರ ಗಳ ವಿರುದ್ದ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುತ್ತಾರೆ .
ಆದರೆ ಈ ಅಕ್ರಮದಲ್ಲಿ ಬಾಗಿಯಾಗಿದ್ದ ಅಂದಿನ ಶಿರಸ್ತೆದಾರ್, ಎಡಿಎಲ್ ಆರ್, ಸರ್ವೆಯರ್ ಹಾಗೂ ಸರ್ವೆ ಸೂರ್ ವೈಸರ್ ಗಳನ್ನ ಪ್ರಕರಣದಿಂದ ಕೈ ಬಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.. ಈ ಅಕ್ರಮದಲ್ಲಿ ಬಾಗಿಯಾಗಿರುವ ಸಿಬ್ಬಂದಿಗಳ ವಿರುದ್ದ ಕೆ.ಸಿ ಎಸ್ ಆರ್ ರ ಪ್ರಕಾರ ಕ್ರಮ ಜರುಗಿಸುವಂತೆ ಬೆಳಗೊಳ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ…
ಅಂದಿನ ಬೆಳಗೊಳ ವ್ಯಾಪ್ತಿಯ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ, ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ, ನಗರ ಮತ್ತು ಗ್ರಾಮಾಂತರ ಯೋಜನಾ ಶಾಖೆಯ ಸಹಾಯಕ ನಿರ್ದೇಶಕರ ಬಾಲಗಂಗಾಧರ ವಿರುದ್ಧ ಶಿಸ್ತುಕ್ರಮಕ್ಕಾಗಿ ಅನುಬಂಧ ೧-೪ ರಂತೆ ದೋಷಾರೋಪಣ ಪಟ್ಟಿ ಸಿದ್ದಪಡಿಸಲು ಮಂಡ್ಯ ಜಿಲ್ಲಾಧಿಕಾರಿ ಗಳು ಶ್ರೀರಂಗಪಟ್ಟಣ ತಾಲ್ಲೋಕು ತಹಶೀಲ್ದಾರ್ ರವರಿಗೆ ಆದೇಶ ಮಾಡಿದ್ದಾರೆ.