ಕೆ.ಆರ್.ನಗರ:ಜೋಡಿ ಕೊಲೆ ಪ್ರಕರಣ…21 ದಿನಗಳಾದರೂ ದೊರೆಯದ ಹಂತಕರ ಸುಳಿವು…ಮೃತರ ಮಾಹಿತಿಯೂ ಇಲ್ಲ…
- Crime
- January 10, 2024
- No Comment
- 289

ಕೆ.ಆರ್.ನಗರ,ಜ10,Tv10 ಕನ್ನಡ
ಕೆ.ಆರ್.ನಗರ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ದೊರೆತ ಇಬ್ಬರು ಯುವಕರ ಮೃತದೇಹ ಪ್ರಕರಣ ಕುರಿತಂತೆ ಪೊಲೀಸರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.ಜೋಡಿ ಕೊಲೆ ಪ್ರಕರಣ ನಡೆದು 21 ದಿನಗಳಾದರೂ ಮೃತರು ಯಾರೆಂಬ ಮಾಹಿತಿಯೇ ದೊರೆತಿಲ್ಲ.ತಲೆನೋವಾಗಿರುವ ಪ್ರಕರಣದ ನಿಗೂಢ ರಹಸ್ಯ ಭೇಧಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಯುವಕರ ಶವದ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ ಗಳು ಮೃತರ ಚಹರೆಗೆ ಹೋಲಿಕೆಯಾಗದಿರುವುದು ಪ್ರಕರಣದ ನಿಗೂಢತೆಯನ್ನ ಬಯಲಿಗೆಳೆಯಲು ಹಿನ್ನಡೆಯಾಗಿದೆ.ಸಧ್ಯದ ಪೊಲೀಸರ ತನಿಖೆಯಲ್ಲಿ ಮೃತರು ಹೊರರಾಜ್ಯದವರು ಇರಬಹುದೆಂದು ಶಂಕಿಸಿದ್ದಾರೆ.ಮೃತರ ಮಾಹಿತಿಯೇ ದೊರೆಯದ ಕಾರಣ ಹಂತಕರ ಪತ್ತೆ ಮತ್ತಷ್ಟು ಕಗ್ಗಂಟಾಗಿದೆ.ಯುವಕರ ಮಾಹಿತಿ ಪತ್ತೆಗೆ ಜಿಲ್ಲಾ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.ಹೀಗಿದ್ದೂ ಯುವಕರ ಮಾಹಿತಿ ಪತ್ತೆ ವಿಳಂಬವಾಗಿದೆ.ಮೃತದೇಹವೊಂದರ ಕೈ ಮೇಲೆ VR POSTER 4B LEGEND ಎಂದು ಉಲ್ಲೇಖವಿರುವ ಹಚ್ಚೆ ಕಂಡು ಬಂದಿದೆ.ಮೃತರ ಬಗ್ಗೆ ಮಾಹಿತಿ ತಿಳಿದಲ್ಲಿ ಕೆ.ಆರ್.ನಗರ ಠಾಣೆ ಪೊಲೀಸರಿಗಾಗಲಿ ಅಥವಾ ಜಿಲ್ಲಾ ಪೊಲೀಸರಿಗೆ ತಿಳಿಸಬಹುದಾಗಿದೆ…