
ಇ-ತ್ಯಾಜ್ಯ ಇಂದು ಬಹುಮುಖ್ಯ ಸಮಸ್ಯೆ -ಲಯನ್ ಟಿ.ಹೆಚ್ .ವೆಂಕಟೇಶ್ .
- TV10 Kannada Exclusive
- February 4, 2024
- No Comment
- 288



ಇ-ತ್ಯಾಜ್ಯ ಇಂದು ಪ್ರಪಂಚದಲ್ಲಿ ಬಹು ಮುಖ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾಗಿ ಇಂದಿನಿಂದಲೇ ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಲಯನ್ಸ್ ಜಿಲ್ಲೆ 317 ಜಿ ನ ಸಂಪುಟ ಕಾರ್ಯದರ್ಶಿಯಾದ ಲಯನ್ ಟಿ.ಹೆಚ್ . ವೆಂಕಟೇಶ್ ರವರು ಹೇಳಿದರು. ಅವರು ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ಮತ್ತು ಜಿಲ್ಲಾ ಅಧ್ಯಕ್ಷರು ಇ-ತ್ಯಾಜ್ಯ ವತಿಯಿಂದ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೇಳಿದರು.
ಇ-ತ್ಯಾಜ್ಯ ಜಿಲ್ಲಾ ಅಧ್ಯಕ್ಷರಾದ ಲಯನ್ ಮಕಾಳ ಶಿವಕುಮಾರ್ ಮಾತನಾಡಿ ಪ್ರತಿವಾರ ಮೈಸೂರಿನ ವಿವಿಧ ಜಾಗಗಳಲ್ಲಿ ಇ- ತ್ಯಾಜ್ಯವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಯನ್ ಹೆಚ್ . ಸಿ ಕಾಂತರಾಜು, ಕಾರ್ಯದರ್ಶಿ ಲಯನ್ ಸಿ. ಆರ್ ದಿನೇಶ್ , ಖಜಾಂಚಿ ಕೆ ಟಿ ವಿಷ್ಣು ವಿ.ಶ್ರೀಧರ್ ,ಲಯನ್ ಕೆ ಆರ್ ಭಾಸ್ಕರಾನಂದಾ ಹೆಚ್ .ಕೆ. ಪ್ರಸನ್ನ, ರವಿಚಂದ್ರ ,ಮಲ್ಲಿಕಾರ್ಜುನ್, ಮನು, ರವಿ, ಅಮರ ಭವಾನಿ, ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .