SBI ಮುಖ್ಯಶಾಖೆಯಲ್ಲಿ 45 ಲಕ್ಷ ದುರುಪಯೋಗ ಆರೋಪ…ಮೂವರು ಸಿಬ್ಬಂದಿಗಳ ವಿರುದ್ದ FIR ದಾಖಲು…
- TV10 Kannada Exclusive
- February 11, 2024
- No Comment
- 3677
ಮೈಸೂರು,ಫೆ11,Tv10 ಕನ್ನಡ
SBI ಮುಖ್ಯ ಶಾಖೆಯಲ್ಲಿ ಮೂವರು ಸಿಬ್ಬಂದಿಗಳು 45,48,052/- ರೂಗಳನ್ನ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ್ದಾರೆಂದು ಮುಖ್ಯ ವ್ಯವಸ್ಥಾಪಕರು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬ್ಯಾಂಕಿನ ಸಿಬ್ಬಂದಿಗಳಾದ ರಾಕೇಶ್,ಪ್ರವೀಣ್ ಹಾಗೂ ಭಾಮಿನಿ ಕಂಚಿಗಾರ ಎಂಬ ಮೂವರು ಸಿಬ್ಬಂದಿಗಳ ವಿರುದ್ದ ವ್ಯವಸ್ಥಾಪಕರಾದ ಆರ್.ಡಿ.ಸುಂದರೇಶ್ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕ್ ನ ಸ್ವಾಧೀನದಲ್ಲಿದ್ದ 45,48,052/- ರೂಗಳ ನಾಲ್ಕು ಡಿಡಿ ಗಳನ್ನ ರದ್ದುಪಡಿಸಿ ಬ್ಯಾಂಕ್ ನ ಪಾರ್ಕಿಂಗ್ ಖಾತೆಗೆ ವರ್ಗಾವಣೆ ಮಾಡಿ ನಂತದ ಸದರಿ ಹಣವನ್ನ ಗ್ರಾಹಕರಾದ ಕಾವ್ಯ,ಸಾನಿಯಾರಾವ್ ಹಾಗೂ ಪ್ರಭುದೇವ್ ಎಂಬುವರ ಎಸ್.ಬಿ.ಖಾತೆಗೆ ವರ್ಗಾವಣೆ ಮಾಡಿದ್ದಾರೆ.ನಂತರ ಅವರ ಅನುಮತಿ ಇಲ್ಲದೆ ಮೂವರ ಖಾತೆಯಿಂದ 30-03-2022 ರಂದು SBI ಮ್ಯೂಚುಯಲ್ ಫಂಡ್ ಗೆ ಟ್ರಾನ್ಫರ್ ಮಾಡಿದ್ದಾರೆ.ನಂತರ ಇದೇ ಹಣವನ್ನ 07-04-2022 ರಂದು ಮ್ಯೂಚುವೆಲ್ ಫಂಡ್ ನಿಂದ ಹಿಂಪಡೆದು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಿ ಮತ್ತೆ ಬ್ಯಾಂಕಿನ ಹೆಸರಿಗೆ ನಾಲ್ಕು ಡಿಡಿಗಳನ್ನ ಮಾಡಿ ಜಮಾ ಮಾಡಿದ್ದಾರೆ.30-03-2022 ರಿಂದ 07-04-2022 ರವರೆಗೆ 45,48,052/- ರೂ ಹಣವನ್ನ ತಾತ್ಕಾಲಿಕವಾಗಿ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ವಂಚಿಸಿ ಗ್ರಾಹಕರ ಅನುಮತಿ ಇಲ್ಲದೆ ಮ್ಯೂಚುಯಲ್ ಫಂಡ್ ಗೆ ಇನ್ವೆಸ್ಟ್ ಮಾಡಿ ಪ್ರಾದೇಶಿಕ ಕಚೇರಿಗೆ ತಪ್ಪುಮಾಹಿತಿ ನೀಡಿರುವ ಮೂವರು ಸಿಬ್ಬಂದಿಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವಂತೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮುಖ್ಯ ವ್ಯವಸ್ಥಾಪಕರು ಪ್ರಕರಣ ದಾಖಲಿಸಿದ್ದಾರೆ…